HomeBusinessಅಡಕೆ ಬೆಳೆಗಾರರಿಗೆ ಶಾಕಿಂಗ್ ನ್ಯೂಸ್: ಲಂಕಾದಿಂದ 5 ಲಕ್ಷ ಟನ್ ಅಡಕೆ ಆಮದಿಗೆ ಖಾಸಗಿ ಕಂಪನಿ...

ಅಡಕೆ ಬೆಳೆಗಾರರಿಗೆ ಶಾಕಿಂಗ್ ನ್ಯೂಸ್: ಲಂಕಾದಿಂದ 5 ಲಕ್ಷ ಟನ್ ಅಡಕೆ ಆಮದಿಗೆ ಖಾಸಗಿ ಕಂಪನಿ ಡೀಲ್: ದರ ಕುಸಿತ ಆತಂಕ

ನವದೆಹಲಿ: ಅಡಕೆ ಮಾರಾಟ ಆರಂಭವಾಗಿರುವ ಸಂದರ್ಭದಲ್ಲಿಯೇ ಶ್ರೀಲಂಕಾದಿಂದ 5 ಲಕ್ಷ ಟನ್ ಅಡಕೆ ಆಮದಿಗೆ ಖಾಸಗಿ ಕಂಪನಿಯೊಂದು ಮುಂದಾಗಿದ್ದು, ಬೆಳೆಗಾರರಿಗೆ ದರ ಕುಸಿತದ ಆತಂಕ ಎದುರಾಗಿದೆ.

ಎಸ್ ರಾಂ ಅಂಡ್ ಎನ್ ರಾಂ ಗ್ರೂಪ್ ನಿಂದ ಶ್ರೀಲಂಕಾ ಜೊತೆಗೆ ಅಡಿಕೆ ಆಮದು ಒಪ್ಪಂದ ಮಾಡಿಕೊಳ್ಳಲಾಗಿದೆ. ಶ್ರೀಲಂಕಾ ಮೂಲದ ವ್ಯಾಪಾರಿ ಸಂಸ್ಥೆ ಪ್ರೈಮ್ ಸ್ಟಾರ್ ಪ್ರೈವೇಟ್ ಲಿಮಿಟೆಡ್ ಜೊತೆಗೆ ಬ್ರಿಟನ್ ಮೂಲದ ಎಸ್ ರಾಂ ಅಂಡ್ ಎಂ ರಾಂ ಗ್ರೂಪ್ ಅಡಕೆ ಅಮದು ಒಪ್ಪಂದ ಮಾಡಿಕೊಂಡಿರುವುದಾಗಿ ಹೇಳಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

2022ರ ಏಪ್ರಿಲ್ -ಡಿಸೆಂಬರ್ ಅವಧಿಯಲ್ಲಿ ಭಾರತ 53.71 ಕೋಟಿ ರೂ. ಮೌಲ್ಯದ ಅಡಿಕೆ ಆಮದು ಮಾಡಿಕೊಂಡಿದೆ. 2023ರ ಏಪ್ರಿಲ್ -ಡಿಸೆಂಬರ್ ಅವಧಿಯಲ್ಲಿ 4.04 ರೂ.ಗೆ ಇದು ಕುಸಿತ ಕಂಡಿದ್ದು, ಇದೀಗ ಶ್ರೀಲಂಕಾದಿಂದ ಭಾರಿ ಪ್ರಮಾಣದಲ್ಲಿ ಅಡಕೆ ಆಮದಿಗೆ ಮುಂದಾಗಿರುವುದರಿಂದ ಬೆಳೆಗಾರರು ಕಂಗಾಲಾಗುವಂತಾಗಿದೆ. ಗುಣಮಟ್ಟ ಕಾಯ್ದುಕೊಳ್ಳಲು ಕೆಜಿಗೆ 351 ರೂಪಾಯಿಗಿಂತ ಕಡಿಮೆ ಇಲ್ಲದ ಅಡಕೆ ಆಮದಿಗೆ ಮಾತ್ರವೇ ಅವಕಾಶ ಇದೆ ಎಂದು ವಿದೇಶಿ ವ್ಯಾಪಾರ ಮಹಾ ನಿರ್ದೇಶನಾಲಯ ತಿಳಿಸಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular