HomeEntertainmentನಾಳೆ ಬಿಡುಗಡೆಯಾಗಲಿದೆ 'ಕೆರೆ ಬೇಟೆ' ಚಿತ್ರದ ಮೆಲೊಡಿ ಹಾಡು

ನಾಳೆ ಬಿಡುಗಡೆಯಾಗಲಿದೆ ‘ಕೆರೆ ಬೇಟೆ’ ಚಿತ್ರದ ಮೆಲೊಡಿ ಹಾಡು

ರಾಜ್ ಗುರು ನಿರ್ದೇಶನದ ಗೌರಿಶಂಕರ್ ಅಭಿನಯದ ‘ಕೆರೆ ಬೇಟೆ’ ಚಿತ್ರದ ‘ಕಣ್ಣುಗಳೇ ಕಳೆದು ಹೋದಾಗ’ ಎಂಬ ಮೆಲೋಡಿ ಹಾಡನ್ನು ನಾಳೆ ಅಶ್ವಿನಿ ಪುನೀತ್ ರಾಜಕುಮಾರ್ ಬಿಡುಗಡೆ ಮಾಡಲಿದ್ದಾರೆ. ಈ ಕುರಿತು ಚಿತ್ರತಂಡ ಇಂದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.

ಈ ಚಿತ್ರವನ್ನು ಜನಮನ ಸಿನಿಮಾಸ್ ಬ್ಯಾನರ್ ನಲ್ಲಿ ಜೈ ಶಂಕರ್ ಪಾಟೀಲ್ ನಿರ್ಮಾಣ ಮಾಡಿದ್ದು, ಗೌರಿಶಂಕರ್ ಸೇರಿದಂತೆ ಬಿಂದು ಶಿವರಾಂ, ಗೋಪಾಲ್ ದೇಶಪಾಂಡೆ, ಸಂಪತ್ ಮೈತ್ರಿಯ, ಹರಿಣಿ ಶ್ರೀಕಾಂತ್, ಚಿಲ್ಲರ್ ಮಂಜು, ರಾಕೇಶ್ ಪೂಜಾರಿ, ವರ್ಧನ್ ತೀರ್ಥಹಳ್ಳಿ, ರಾಮದಾಸ್ ಬಣ್ಣ ಹಚ್ಚಿದ್ದಾರೆ. ಜ್ಞಾನೇಶ್ ಬಿ ಮಾತಾಡ್ ಸಂಕಲನ, ಕೀರ್ತನ್ ಪೂಜಾರಿ ಛಾಯಾಗ್ರಹಣವಿದೆ. ಡಿಫ್ರೆಂಟ್ ಡ್ಯಾನಿ ಮತ್ತು ಟೈಗರ್ ಶಿವು ಸಾಹಸ ನಿರ್ದೇಶನವಿದ್ದು, ಗೌರಿಶಂಕರ್ ಡೈಲಾಗ್ ಬರೆದಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular