HomeEntertainment'ಹೈಡ್ ಅಂಡ್ ಸೀಕ್' ಚಿತ್ರದ ಲಿರಿಕಲ್ ಹಾಡು ರಿಲೀಸ್

‘ಹೈಡ್ ಅಂಡ್ ಸೀಕ್’ ಚಿತ್ರದ ಲಿರಿಕಲ್ ಹಾಡು ರಿಲೀಸ್

ಪುನೀತ್ ನಾಗರಾಜ್ ನಿರ್ದೇಶನದ ‘ಹೈಡ್ ಅಂಡ್ ಸೀಕ್’ ಚಿತ್ರದ ‘ಕೊಡುವೆ ನೀ ಯಾಕೆ’ ಎಂಬ ಲಿರಿಕಲ್ ಹಾಡು ಇಂದು ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಸಂಗೀತ ರವೀಂದ್ರನಾಥ್ ಈ ಹಾಡಿಗೆ ಧ್ವನಿಯಾಗಿದ್ದು, ಸ್ಯಾಂಡಿ ಅಡ್ಡಂಕಿ ಸಂಗೀತ ಸಂಯೋಜನೆ ನೀಡಿದ್ದಾರೆ. ಪ್ರಮೋದ್ ಮರವಂತೆ ಸಾಹಿತ್ಯ ಬರೆದಿದ್ದಾರೆ.

ಈ ಚಿತ್ರದಲ್ಲಿ ಅನುಪ್ ರೇವಣ್ಣ ಮತ್ತು ಧನ್ಯ ರಾಮ್ ಕುಮಾರ್ ಮುಖ್ಯ ಭೂಮಿಕೆಯಲ್ಲಿದ್ದು,  ಮೈತ್ರಿ ಜಗ್ಗಿ, ಸೂರಜ್, ಬಾಲರಾಜ್ವಾಡಿ, ಕೃಷ್ಣ ಹೆಬ್ಬಾಳೆ, ರಾಜೇಶ್ ನಟರಂಗ, ಮತ್ತು  ಅರವಿಂದ ರಾವ್ ಉಳಿದ ಪಾತ್ರ ವರ್ಗದಲ್ಲಿದ್ದಾರೆ. ಸುನೇರಿ ಆರ್ಟ್ ಕ್ರಿಯೇಷನ್ ಬ್ಯಾನರ್ ನಡಿ ವಸಂತ್ ರಾವ್ ಕುಲಕರ್ಣಿ ಮತ್ತು ಪುನೀತ್ ನಾಗರಾಜ್ ಬಂಡವಾಳ ಹೂಡಿದ್ದು, ಮಧು ತುಂಬಾ ಕೆರೆ ಸಂಕಲನವಿದೆ.

For Latest News Updates, Join Our Whatsapp Community🚩
RELATED ARTICLES

Most Popular