ಅಭಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ಸೋಮು ಸೌಂಡ್ ಇಂಜಿನಿಯರ್’ ಚಿತ್ರದ ಟ್ರೈಲರ್ ಇಂದು ಸಂಜೆ 6 ಗಂಟೆಗೆ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಲಿದೆ. ಖ್ಯಾತ ನಿರ್ದೇಶಕರಾದ ದುನಿಯಾ ಸೂರಿ ಮತ್ತು ನಟ ಡಾಲಿ ಧನಂಜಯ್ ಅವರ ಕೈಯಲ್ಲಿ ಟ್ರೈಲರ್ ಲಾಂಚ್ ಮಾಡಿಸಲಾಗುತ್ತಿದೆ.
ಈ ಚಿತ್ರದಲ್ಲಿ ಶ್ರೇಷ್ಠ ನಾಯಕ ನಟನಾಗಿ ಅಭಿನಯಿಸಿದ್ದು, ನಿವಿಷ್ಕ ಪಾಟೀಲ್, ಜಹಾಂಗೀರ್, ಗಿರೀಶ್ ಜಟ್ಟಿ, ಯಶ್, ಅಪೂರ್ವ, ಸೇರಿದಂತೆ ಚಂದನ್ ಕೆ ಗೌಡ ಬಣ್ಣ ಹಚ್ಚಿದ್ದಾರೆ.
ಚರಣ್ ರಾಜ್ ಸಂಗೀತ ಸಂಯೋಜನೆ ನೀಡಿದ್ದು, ಕ್ರಿಸ್ಟೋಪರ್ ಕಿನಿ ನಿರ್ಮಾಣದ ಜವಾಬ್ದಾರಿಯನ್ನು ಒತ್ತಿದೆ. ದೀಪು ಎಸ್ ಕುಮಾರ್ ಸಂಕಲನ, ಶಿವಸೇನ ಛಾಯಾಗ್ರಹಣ, ಮಾಸ್ತಿ ಮತ್ತು ಅಭಿ ಸಂಭಾಷಣೆ, ವಿನೋದ್ ಹಾಗೂ ಜಾಲಿ ಬಾಸ್ಟಿನ್ ಸಾಹಸ ನಿರ್ದೇಶನವಿದೆ.
Brace yourselves for the unveiling of 'Somu Sound Engineer' official trailer by Daali Dananjaya and Duniya Suri, set to release on March 6th at 6 PM on A2 Music!
#SomuSoundEngineer #TrailerRelease #A2Music #KannadaMovies pic.twitter.com/L0EyowtvdH
— A2 Music (@A2MusicSouth) March 1, 2024

