ಗುರುಗ್ರಾಮ್ ನ ರೆಸ್ಟೋರೆಂಟ್ ನಲ್ಲಿ ಮೌತ್ ಫ್ರೆಶ್ನರ್ ಸೇವಿಸಿದ ಕನಿಷ್ಠ ಐದು ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಅಮಿತ್ ಕುಮಾರ್ ಎಂಬಾತ ಪತ್ನಿ ಮತ್ತು ಸ್ನೇಹಿತರೊಂದಿಗೆ ಗುರುಗ್ರಾಮದ ಸೆಕ್ಟರ್ 90 ನಲ್ಲಿರುವ ಲಾ ಫಾರೆಸ್ಟಾ ಕೆಫೆಗೆ ಭೇಟಿ ನೀಡಿದಾಗ ಈ ಘಟನೆ ಸಂಭವಿಸಿದೆ.
ಊಟ ಮಾಡಿದ ನಂತರ, ಅವರಿಗೆ ರೆಸ್ಟೋರೆಂಟ್ ಸಿಬ್ಬಂದಿ ಮೌತ್ ಫ್ರೆಶ್ನರ್‌ಗಳನ್ನು ನೀಡಿದ್ದು, ಅವರ ಆರೋಗ್ಯವು ತಕ್ಷಣವೇ ಕ್ಷೀಣಿಸಲು ಕಾರಣವಾಗಿದೆ. ಮೌತ್ ಫ್ರೆಶ್‌ನರ್‌ಗಳನ್ನು ಸೇವಿಸಿದವರಿಗೆ ನಿರಂತರ ವಾಂತಿ ಮತ್ತು ಬಾಯಿಯಿಂದ ರಕ್ತಸ್ರಾವವಾಗತೊಡಗಿತು. ಅವರ ಸ್ಥಿತಿ ಹದಗೆಟ್ಟಿದ್ದರೂ, ರೆಸ್ಟೋರೆಂಟ್ ನವರು ಸಹಾಯ ಮಾಡದೆ ಅಸಡ್ಡೆ ತೋರಿದ್ದಾರೆ ಎಂದು ಅಮಿತ್ ಕುಮಾರ್ ಆರೋಪಿಸಿದ್ದಾರೆ.
ನಂತರ ಘಟನೆಯ ಬಗ್ಗೆ ಗುರುಗ್ರಾಮ್ ಪೊಲೀಸರಿಗೆ ಮಾಹಿತಿ ನೀಡಿದ್ದು, ಅವರು ಸ್ಥಳಕ್ಕೆ ಧಾವಿಸಿ ಅವರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಿದರು. ಅಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ನಂತರ, ರೆಸ್ಟೋರೆಂಟ್ ಮಾಲೀಕರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.