ರಾಜ್ಯದ ಗ್ರಾಮೀಣ ಜನತೆಗೆ ಗುಡ್ ನ್ಯೂಸ್ : ಈ ಎಲ್ಲಾ ಸೇವೆಗಳು ‘ಪಂಚಮಿತ್ರ’ ಪೋರ್ಟಲ್ ನಲ್ಲಿ ಲಭ್ಯ..!

ಬೆಂಗಳೂರು : ಗ್ರಾಮೀಣ ಪ್ರದೇಶದಲ್ಲಿ ಮೊಬೈಲ್ ಆಧಾರಿತ ಇಂಟರ್ನೆಟ್ ಸೇವೆ ಶೇ 96.86ರಷ್ಟು ಲಭ್ಯವಿದೆ. ಶೇ 80ಕ್ಕೂ ಹೆಚ್ಚು ಜನರು ವಾಟ್ಸಾಪ್ ಬಳಕೆ ಮಾಡುತ್ತಿದ್ದಾರೆ. ಹೀಗಾಗಿ ಗ್ರಾಮೀಣ ಜನರಿಗೆ ಈ ಸೇವೆ ಪಡೆಯುವುದು ಸುಲಭವಾಗಿದೆ ಎಂದು ಸರ್ಕಾರ ಪ್ರಕಟಣೆ ಹೊರಡಿಸಿದೆ.

ಹೌದು, ಪಂಚಮಿತ್ರವು ಕರ್ನಾಟಕ ಗ್ರಾಮ ಪಂಚಾಯತಿಗಳ ಮುಖಪುಟವಾಗಿದ್ದು, ಸಾರ್ವಜನಿಕರ ಮಾಹಿತಿಯ ವೇದಿಕೆಯಾಗಿದೆ. ಯಾವುದೇ ಗ್ರಾಮ ಪಂಚಾಯಿತಿಯ ಚುನಾಯಿತ ಸದಸ್ಯರ, ಪಂಚಾಯಿತಿ ಸಿಬ್ಬಂದಿಗಳ, ಗ್ರಾಮ ಪಂಚಾಯಿತಿಯ ಸಭಾ ನಡುವಳಿಗಳು, ಮುಂಬರುವ ಸಭೆಗಳ ದಿನಾಂಕ ಮತ್ತು ಅದರಲ್ಲಿ ಚರ್ಚಿಸುವ ವಿಷಯಗಳು, ಗ್ರಾಮ ಪಂಚಾಯಿತಿಯ ಆದಾಯ, ಇತ್ಯಾದಿ ಮಾಹಿತಿಯನ್ನು ಸಾರ್ವಜನಿಕರು ತಿಳಿಯಬಹುದು.ವಾಟ್ಸಾಪ್ ಚಾಟ್ ಆರಂಭಿಸಲಾಗಿದ್ದು, 8277506000 ಸಂಖ್ಯೆಗೆ ವಾಟ್ಸಾಪ್ ಸಂದೇಶ ಕಳುಹಿಸಿದರೆ ಅಧಿಕೃತ ವಾಟ್ಸಾಪ್ ಚಾಟ್ ಆರಂಭಗೊಳ್ಳುತ್ತದೆ. ನಂತರ ಭಾಷೆ, ಜಿಲ್ಲೆ, ತಾಲೂಕು ಹಾಗೂ ಗ್ರಾಮ ಪಂಚಾಯಿತಿ ಆಯ್ಕೆ ಮಾಡಿ. ಅಗತ್ಯವಿರುವ ಮಾಹಿತಿ ತಿಳಿಯಬಹುದು.

ಯಾವೆಲ್ಲಾ ಸೇವೆಗಳು ಲಭ್ಯ..?

* ಕಟ್ಟಡ ನಿರ್ಮಾಣ ಪರವಾನಗಿ
*ಹೊಸ ನೀರು ಸರಬರಾಜು ಸಂಪರ್ಕ
* ನೀರು ಸರಬರಾಜಿನ ಸಂಪರ್ಕ ಕಡಿತ
*ಕುಡಿಯುವ ನೀರಿನ ನಿರ್ವಹಣೆ
* ಬೀದಿ ದೀಪದ ನಿರ್ವಹಣೆ
* ಗ್ರಾಮ ನೈರ್ಮಲ್ಯ ನಿರ್ವಹಣೆ
* ವ್ಯಾಪಾರ ಪರವಾನಗಿ
* ಸ್ವಾಧೀನ ಪ್ರಮಾಣ ಪತ್ರ • ರಸ್ತೆ ಅಗೆಯುವುದಕ್ಕಾಗಿ ಅನುಮತಿ • ನಮೂನೆ 9/11
*ನಮೂನೆ 11 ಬಿ
* ನಿರಾಕ್ಷೇಪಣಾ ಪತ್ರ
*ನರೇಗಾ ಅಡಿ ಕಾರ್ಮಿಕರಿಗೆ ಜಾಬ್ ಕಾರ್ಡ್ ವಿತರಣೆ
* ಕಾರ್ಮಿಕರಿಗೆ ಉದ್ಯೋಗ ಒದಗಿಸುವುದು
* ಕೈಗಾರಿಕೆ, ಕೃಷಿ ಆಧಾರಿತ ಉತ್ಪಾದನಾ ಘಟಕ ಸ್ಥಾಪನೆಗೆ ಅನುಮತಿ
*ಹೊಸ/ಅಸ್ತಿತ್ವದಲ್ಲಿರುವ ದೂರಸಂಪರ್ಕ
*ಮೂಲಸೌಕರ್ಯ ಗೋಪುರಕ್ಕೆ ಅನುಮತಿ, ನಿಯಮಿತಗೊಳಿಸುವಿಕೆ
* ಹೊಸ/ಅಸ್ತಿತ್ವದಲ್ಲಿರುವ ಓವರ್ ಗೌಂಡ್ಕೇಬಲ್ ಮೂಲಸೌಕರ್ಯ/ಭೂಗತ ಕೇಬಲ್ ಮೂಲ
*ಲಭ್ಯ ಸೇವೆಗಳು ಸೌಕರ್ಯಕ್ಕಾಗಿ ಅನುಮತಿ, ನಿಯಮಿತಗೊಳಿಸುವಿಕೆ

ಸೇವೆ ಪಡೆಯುವುದು ಹೇಗೆ..?

8277506000 ವಾಟ್ಸಾಪ್ ಸಂಖ್ಯೆಯನ್ನು ಸೇವ್ ಮಾಡಿ, ಹಾಯ್ ಎ೦ದು ಸ೦ದೇಶ ಕಳುಹಿಸಿದರೆ ಅಧಿಕೃತ ವಾಟ್ಸಾಪ್ ಚಾಟ್ ಆರಂಭಗೊಳ್ಳುತ್ತದೆ. ನಂತರ ಭಾಷೆ, ಜಿಲ್ಲೆ, ತಾಲೂಕು ಹಾಗೂ ಗ್ರಾಮ ಪಂಚಾಯಿತಿ ಆಯ್ಕೆ ಮಾಡಿ. ಹೆಚ್ಚಿನ ಸೇವೆಗಳಿಗೆ ‘ಪಂಚಮಿತ್ರ – ಸಾರ್ವಜನಿಕ ಮಾಹಿತಿ ಪೋರ್ಟಲ್’ಗೆ ಭೇಟಿ ನೀಡಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read