HomeLatest Newsಕಲ್ಯಾಣ ಕರ್ನಾಟಕದ ಜನತೆಗೆ ಗುಡ್ ನ್ಯೂಸ್ : ʼಆರೋಗ್ಯ ಆವಿಷ್ಕಾರʼ ಯೋಜನೆಗೆ 300 ಕೋಟಿ ರೂ.ಮೀಸಲು

ಕಲ್ಯಾಣ ಕರ್ನಾಟಕದ ಜನತೆಗೆ ಗುಡ್ ನ್ಯೂಸ್ : ʼಆರೋಗ್ಯ ಆವಿಷ್ಕಾರʼ ಯೋಜನೆಗೆ 300 ಕೋಟಿ ರೂ.ಮೀಸಲು

ಬೆಂಗಳೂರು :  ಕೆಕೆಆರ್‌ಡಿಬಿ ಅಧ್ಯಕ್ಷರಾದ ಡಾ.ಅಜಯ್‌ ಸಿಂಗ್‌ರವರು ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆಗಳನ್ನು ನೀಡಲು 300 ಕೋಟಿ ರೂಪಾಯಿ ಮೀಸಲಿಟ್ಟು ʼಆರೋಗ್ಯ ಆವಿಷ್ಕಾರʼ ಯೋಜನೆ ರೂಪಿಸಿರುವುದು ಬಹಳ ಸಂತಸ ತಂದಿದೆ ಎಂದು ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಸಚಿವರು, ಆರೋಗ್ಯ ಇಲಾಖೆ ಸಹಯೋಗದೊಂದಿಗೆ ಕೆಕೆಆರ್‌ಡಿಬಿಯಿಂದ ಆರೋಗ್ಯ ಆವಿಷ್ಕಾರ ಯೋಜನೆಯಡಿಯಲ್ಲಿ ಕಲ್ಯಾಣ ಕರ್ನಾಟಕ ಭಾಗದ 7 ಜಿಲ್ಲೆಗಳಲ್ಲಿ 46 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ನಿರ್ಮಾಣ ಹಾಗೂ ಹೃದ್ರೋಗಳಿಗೆ ಹಾರ್ಟ್‌ಲೈನ್‌ ಹೆಸರಿನಲ್ಲಿ 9 ಆಂಬ್ಯುಲೆನ್ಸ್‌ ಖರೀದಿ ಸೇರಿದಂತೆ ಹಲವು ಯೋಜನೆಗಳನ್ನು ಘೋಷಿಸಿದ್ದಾರೆ.

ಕಲ್ಯಾಣ ಕರ್ನಾಟಕ ಭಾಗದಲ್ಲಿರುವ ಆರೋಗ್ಯ ಅಸಮಾನತೆಗಳನ್ನು ಮೆಟ್ಟಿ ನಿಲ್ಲಲು ಈ ಆರೋಗ್ಯ ಆವಿಷ್ಕಾರ ಯೋಜನೆ ಸುವರ್ಣ ಅವಕಾಶ ನೀಡುತ್ತದೆ. ಇದನ್ನು ಜಾರಿಗೊಳಿಸುತ್ತಿರುವ ಕೆಕೆಆರ್‌ಡಿಬಿ ಅಧ್ಯಕ್ಷರಾದ ಡಾ.ಅಜಯ್‌ ಧರಂಸಿಂಗ್‌ ಅವರಿಗೆ ತುಂಬು ಹೃದಯದ ಅಭಿನಂದನೆಗಳು ಎಂದು ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular