ಬೆಂಗಳೂರು : ಮೈಸೂರ್ ಸ್ಯಾಂಡಲ್ ಸೋಪ್ ಕರ್ನಾಟಕ ಸೋಪ್ಸ್ ಮತ್ತು ಡಿಟರ್ಜೆಂಟ್ಸ್ ಲಿಮಿಟೆಡ್ (KSDL) ನಿಂದ ತಯಾರಿಸಲ್ಪಟ್ಟ ಸಾಬೂನಿನ ಬ್ರಾಂಡ್ ಆಗಿದೆ , ಇದು ಕರ್ನಾಟಕ ಸರ್ಕಾರದ ಒಡೆತನದಲ್ಲಿದ್ದು, ಈ ಸೋಪ್ ಕವರಿನ ಮೇಲೆ ಹಿಂದಿ ಬಳಕೆ ಮಾಡಿದ್ದಕ್ಕೆ ಕನ್ನಡಿಗರು ಕಿಡಿಕಾರಿದ್ದಾರೆ.
ಹೌದು, ಮೈಸೂರು ಸ್ಯಾಂಡಲ್ ಸೋಪಿನ ಕವರಿನ ಮೇಲೆ ಹಿಂದಿ ಬಳಕೆ ಮಾಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಕರ್ನಾಟಕ ಸರ್ಕಾರದ ಬ್ರ್ಯಾಂಡ್ ನಲ್ಲಿ ಹಿಂದಿ ಬಳಕೆ ಸರಿಯೇ..? ಎಂದು ಕನ್ನಡಿಗರು ಸೋಶಿಯಲ್ ಮೀಡಿಯಾದಲ್ಲಿ ಕಿಡಿಕಾರಿದ್ದಾರೆ.
ಈ ಹಿಂದೆ ನಂದಿನಿ ಹಾಲಿನ ಪ್ಯಾಕೆಟ್ ನಲ್ಲಿ ಹಿಂದಿ ಬಳಸಲಾಗಿತ್ತು, ಕನ್ನಡದ ಹೆಮ್ಮೆಯ ನಂದಿನಿ ಹಾಲಿನ ಪೊಟ್ಟಣಗಳ ಮೇಲೆ ವಿವರಗಳನ್ನೆಲ್ಲ ಹಿಂದಿಯಲ್ಲಿ ಮುದ್ರಿಸಲಾಗಿತ್ತು, ಇದಕ್ಕೆ ಭಾರಿ ವಿರೋಧ ವ್ಯಕ್ತವಾದ ಹಿನ್ನೆಲೆ ಹಿಂದಿ ಪದವನ್ನು ತೆಗೆಸಲಾಗಿತ್ತು. ನಂದಿನಿ ಹಾಲಿನ ಪ್ಯಾಕೆಟ್ ಬಳಿಕ ಮೈಸೂರು ಸ್ಯಾಂಡಲ್ ಸೋಪಿನ ಕವರ್ ಮೇಲೆ ಮೇಲೆ ಹಿಂದಿ ಹೇರಲಾಗಿದ್ದು, ಹಿಂದಿ ಪದವನ್ನು ತೆಗೆಯುವಂತೆ ಆಗ್ರಹಿಸಿದ್ದಾರೆ.