ಬೆಂಗಳೂರು : ಕಾಂಗ್ರೆಸ್ ಇದ್ದರೇ ಆಪತ್ತು ಎಲ್ಲಿಂದ ಬೇಕಾದರೂ ಬರಬಹುದು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ಧಾಳಿ ನಡೆಸಿದ್ದಾರೆ.
ಟ್ವೀಟ್ ಮಾಡಿರುವ ಬಸನಗೌಡ ಪಾಟೀಲ್ ಯತ್ನಾಳ್ ಕುಕ್ಕರ್, ಬ್ಯಾಗ್ ಫೋಟೋ ಹಂಚಿಕೊಂಡು ಕಾಂಗ್ರೆಸ್ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ.
ರಾಮೇಶ್ವರಂ ಕೆಫೆಯಲ್ಲಿ ಉದ್ದೇಶ ಪೂರ್ವಕವಾಗಿ ಶುಕ್ರವಾರ ದಿನವೇ ಬ್ಲಾಸ್ಟ್ ಮಾಡಿದ್ದಾರೆ. ಅಯೋಧ್ಯಾ ರಾಮ ಮಂದಿರ ನಿರ್ಮಾಣವನ್ನು ಸಹಿಸಲಾಗದೆ ಬ್ಲಾಸ್ಟ್ ಮಾಡಿದ್ದಾರೆ ಎಂದು ಕೂಡ ವಾಗ್ಧಾಳಿ ನಡೆಸಿದ್ದಾರೆ. ಬ್ರ್ಯಾಂಡ್ ಬೆಂಗಳೂರು ಅಲ್ಲ ಬಾಂಬ್ ಬೆಂಗಳೂರು ಆಗಿದೆ. ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟದಲ್ಲೂ ಕಾಂಗ್ರೆಸ್ನವರು ಹೀಗೆ ಹೇಳಿದ್ದರು ಎಂದಿದ್ದಾರೆ.
“ಧೈರ್ಯವಾಗಿ ಪ್ರಶ್ನಿಸಿ” 76 ಲಕ್ಷ ಜನಸಂಖ್ಯೆಯಿರುವ ಮುಸ್ಲಿಮರು ಕರ್ನಾಟಕದಲ್ಲಿ ಅಲ್ಪಸಂಖ್ಯಾತರು ಹೇಗೆ? ಅವರಿಗೆ ಅಲ್ಪಸಂಖ್ಯಾತರ ಸವಲತ್ತು ಯಾಕೆ? ಎಂದು ಕಾಂಗ್ರೆಸ್ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ.