ಈಗಾಗಲೇ ತನ್ನ ಟೀಸರ್ ನಿಂದಲೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಸುನಾಮಿ ಕಿಟ್ಟಿ ಅಭಿನಯದ ‘ಕೋರ’ ಚಿತ್ರದ ‘ಬಾನಿನಿಂದ’ ಎಂಬ ಲಿರಿಕಲ್ ಸಾಂಗ್ ನಾಳೆ ಬೆಳಿಗ್ಗೆ 11:30 ಕ್ಕೆ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಲಿದೆ. ಈ ಕುರಿತು ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.
ಒರಟ ಶ್ರೀ ನಿರ್ದೇಶನದ ಈ ಚಿತ್ರದಲ್ಲಿ ಸುನಾಮಿ ಕಿಟ್ಟಿ ಸೇರಿದಂತೆ ಚರಿಷ್ಮಾ, ಪಿ ಮೂರ್ತಿ, ಎಂ ಕೆ ಮಠ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದು, ಶಶಾಂಕ್ ಶೇಷಗಿರಿ ಸಂಗೀತ ಸಂಯೋಜನೆ ನೀಡಿದ್ದಾರೆ. ಪಿ ಮೂರ್ತಿ ತಮ್ಮ ರತ್ನಮ್ಮ ಮೂವೀಸ್ ಬ್ಯಾನರ್ ನಲ್ಲಿ ನಿರ್ಮಾಣ ಮಾಡಿದ್ದು, ಪಿ ಚೆಲುವರಾಜ್ ಸಹ ನಿರ್ಮಾಪಕರಾಗಿದ್ದಾರೆ. ಕೆ ಗಿರೀಶ್ ಕುಮಾರ್ ಸಂಕಲನ, ಸೆಲ್ವಂ ಛಾಯಾಗ್ರಹಣವಿದೆ.