ಬೆಂಗಳೂರು: ರಾಜ್ಯದ ಜನತೆಗೆ ರಾಜ್ಯ ಸರ್ಕಾರ ಮತ್ತೊಂದು ಗುಡ್ ನ್ಯೂಸ್ ನೀಡಿದೆ. ವಿದ್ಯುತ್ ದರ ಇಳಿಕೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಸರಾಸರಿ 100 ಯೂನಿಟ್ ಬಳಸುವವರಿಗೆ ಅನುಕೂಲವಾಗಲಿದೆ. ಪ್ರತಿ ಯೂನಿಟ್ ವಿದ್ಯುತ್ ದರ 1 ರೂ. 10 ಪೈಸೆ ದರ ಇಳಿಸಲಾಗಿದೆ. ವಾಣಿಜ್ಯ ಬಳಕೆ ವಿದ್ಯುತ್ ದರದಲ್ಲಿಯೂ ಇಳಿಕೆ ಮಾಡಲಾಗಿದೆ. ವಾಣಿಜ್ಯ ಬಳಕೆ ವಿದ್ಯುತ್ ದರ ಯೂನಿಟ್ ಗೆ 1 ರೂ.25 ಪೈಸೆ ಕಡಿಮೆ ಮಾಡಲಾಗಿದೆ.
ಆಸ್ಪತ್ರೆ, ಶಿಕ್ಷಣ ಸಂಸ್ಥೆಗಳಿಗೆ ಯೂನಿಟ್ ಗೆ 40 ಪೈಸೆ, ಖಾಸಗಿ ಏತನೀರಾವರಿ ಬಳಕೆ ದರ ಯೂನಿಟ್ ಗೆ 2 ರೂಪಾಯಿ, ಕೈಗಾರಿಕೆಗಳ ವಿದ್ಯುತ್ ದರದಲ್ಲಿ 50 ಪೈಸೆ ಹಾಗೂ ಅಪಾರ್ಟ್ ಮೆಂಟ್ ಗಳ ವಿದ್ಯುತ್ ದರದಲ್ಲಿ 10 ಪೈಸೆ ಇಳಿಕೆ ಮಾಡಲಾಗಿದೆ.
ಮಾರ್ಚ್ 1ರಿಂದ ಪರಿಷ್ಕೃತ ದರ ಜಾರಿಗೆ ಬರಲಿದೆ. 5 ಎಸ್ಕಾಂ ಗಳು ವಿದ್ಯುತ್ ದರ ಪರಿಷ್ಕರಣೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದವು.