alex Certify 27 ವರ್ಷಗಳ ಬಳಿಕ ಬ್ಯಾಂಕ್ ಆಫ್ ಬರೋಡಾ ಮ್ಯಾನೇಜರ್ ದೋಷಿ ಎಂದು ಸಿಬಿಐ ಕೋರ್ಟ್ ತೀರ್ಪು : ದಂಡದ ಜೊತೆಗೆ ಜೈಲು ಶಿಕ್ಷೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

27 ವರ್ಷಗಳ ಬಳಿಕ ಬ್ಯಾಂಕ್ ಆಫ್ ಬರೋಡಾ ಮ್ಯಾನೇಜರ್ ದೋಷಿ ಎಂದು ಸಿಬಿಐ ಕೋರ್ಟ್ ತೀರ್ಪು : ದಂಡದ ಜೊತೆಗೆ ಜೈಲು ಶಿಕ್ಷೆ

ನವದೆಹಲಿ : ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಬ್ಯಾಂಕ್ ಆಫ್ ಬರೋಡಾ ವ್ಯವಸ್ಥಾಪಕರಿಗೆ ಮುಂಬೈನ ವಿಶೇಷ ಸಿಬಿಐ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಈ ಪ್ರಕರಣಗಳಲ್ಲಿ ಬ್ಯಾಂಕಿಗೆ 15 ಕೋಟಿ ರೂ.ಗಿಂತ ಹೆಚ್ಚು ನಷ್ಟಕ್ಕೆ ಸಂಬಂಧಿಸಿದ ಚಾರ್ಜ್ ಶೀಟ್ ಅನ್ನು 27 ವರ್ಷಗಳ ಹಿಂದೆ ಸಲ್ಲಿಸಲಾಗಿದೆ.

1996ರಲ್ಲಿ ಮುಂಬೈನ ವಾಲ್ಕೇಶ್ವರ ರಸ್ತೆ ಶಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅಂದಿನ ಮುಖ್ಯ ವ್ಯವಸ್ಥಾಪಕ ರಾಮಚಂದ್ರ ಶ್ರೀಧರ್ ಜೋಶಿ ವಿರುದ್ಧ ಸಿಬಿಐ ಎರಡು ಪ್ರಕರಣಗಳಲ್ಲಿ ಚಾರ್ಜ್ ಶೀಟ್ ಸಲ್ಲಿಸಿತ್ತು. ಬ್ಯಾಂಕಿನ ಹಣವನ್ನು ಮೋಸದಿಂದ ಸಂಚುಕೋರರಿಗೆ ನೀಡುವ ಮೂಲಕ, ವ್ಯವಸ್ಥಾಪಕರು 10.50 ಕೋಟಿ ಮತ್ತು 5 ಕೋಟಿ ರೂ.ಗಳ ನಷ್ಟವನ್ನುಂಟು ಮಾಡಿದ್ದಾರೆ ಎಂದು ಸಂಸ್ಥೆ ಹೇಳಿದೆ.

ಕೇಂದ್ರ ತನಿಖಾ ಸಂಸ್ಥೆ 1994 ರಲ್ಲಿ ತನಿಖೆಯನ್ನು ವಹಿಸಿಕೊಂಡಿತು. ಪ್ರಕರಣದ ವಿಚಾರಣೆ ಪೂರ್ಣಗೊಂಡ ನಂತರ ಸಿಬಿಐ ವಿಶೇಷ ನ್ಯಾಯಾಲಯವು ರಾಮಚಂದ್ರ ಅವರಿಗೆ ಮೊದಲ ಪ್ರಕರಣದಲ್ಲಿ ಎರಡು ವರ್ಷಗಳ ಜೈಲು ಶಿಕ್ಷೆ ಮತ್ತು ಎರಡನೇ ಪ್ರಕರಣದಲ್ಲಿ 3 ಲಕ್ಷ ರೂ.ಗಳ ದಂಡ ಮತ್ತು 1.37 ಲಕ್ಷ ರೂ.ದಂಡ ಹಾಗೂ ಒಂದು ವೃಷ ಜೈಲು ಶಿಕ್ಷೆ ವಿಧಿಸಿದೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...