ಬೆಂಗಳೂರು : ಕೃಷಿ ಉತ್ಪನ್ನ ಮಾರುಕಟ್ಟೆ ಕಾಯ್ದೆಯಲ್ಲಿನ ನ್ಯೂನತೆಗಳನ್ನು ಗುರುತಿಸುವ ಉದ್ದೇಶದಿಂದ ಪರಿಶೀಲನಾ ಸಮಿತಿ ರಚಿಸಲಾಗಿತ್ತು. ಸಮಿತಿ ಶಿಫಾರಸ್ಸು ಮಾಡಿರುವ 27 ಅಂಶ ಅಳವಡಿಸಿಕೊಂಡು ಕಾಯ್ದೆಗೆ ತಿದ್ದುಪಡಿ ತರಲಾಗಿದೆ ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ತಿಳಿಸಿದ್ದಾರೆ.
ರೈತರನ್ನು ಶೋಷಣೆ ಮಾಡಬಾರದು, ವರ್ತಕರಿಗೂ ತೊಂದರೆ ಆಗಬಾರದು. ಇದನ್ನು ಗಮನದಲ್ಲಿಟ್ಟುಕೊಂಡು ತಿದ್ದುಪಡಿ ತರಲಾಗಿದೆ. ಕಾಳಸಂತೆಗೆ ಕಡಿವಾಣ ಬಗ್ಗೆಯೂ ಒತ್ತು ನೀಡಲಾಗಿದ್ದು, ಅದಕ್ಕಾಗಿ ಸೆಸ್ ಪ್ರಮಾಣ ತಗ್ಗಿಸುವ ಚಿಂತನೆ ಇದೆ. ಸೆಸ್ ಕಡಿಮೆ ಮಾಡಿದರೂ, ಮಾರಾಟ ಪ್ರಮಾಣದಲ್ಲಿ ಹೆಚ್ಚಳದಿಂದ ಆದಾಯ ತಗ್ಗುವುದಿಲ್ಲ ಎಂದು ಹೇಳಿದ್ದಾರೆ.