Dr ದೇವದಾಸ್ ಕಾಫಿ ಕಾಡ್ ರಚಿಸಿ ನಿರ್ದೇಶಿಸಿರುವ ‘ಪುರುಷೋತ್ತಮನ ಪ್ರಸಂಗ’ ಚಿತ್ರದ ಲಿರಿಕಲ್ ಹಾಡು ಯೂಟ್ಯೂಬ್ ನಲ್ಲಿ ನಿನ್ನೆ ಬಿಡುಗಡೆ ಮಾಡಲಾಗಿದ್ದು, ಗಾನಪ್ರಿಯರಿಂದ ಮೆಚ್ಚುಗೆಯ ಸುರಿಮಳೆಯೇ ಹರಿದು ಬಂದಿದೆ. ‘ಮೂಡಣ ನಾಡ’ ಎಂಬ ಈ ಗೀತೆಗೆ ನಕುಲ್ ಅಭ್ಯಂಕರ್ ಧ್ವನಿಯಾಗುವ ಮೂಲಕ ಸಂಗೀತ ಸಂಯೋಜನೆ ನೀಡಿದ್ದಾರೆ. D.r ದೊಡ್ಡರಂಗೇಗೌಡ ಸಾಹಿತ್ಯ ಬರೆದಿದ್ದಾರೆ.
ಈ ಚಿತ್ರದಲ್ಲಿ ಅಜಯ್ ಪೃಥ್ವಿ, ರಿಷಿಕ ನಾಯಕ್, ದೇವದಾಸ್ ಕಾಫಿ ಕಾಡ್, ನವೀನ್ ಡಿ ಪಡಿಲ್, ಅರವಿಂದ್, ಸಾಯಿ ಕೃಷ್ಣ ಕುಡ್ಲ, ದೀಪಿಕಾ ದಿನೇಶ್, ಹರೀಶ್ ಪೂಂಜಾ, ರೂಪಶ್ರೀ, ರಾಮ್ದಾಸ್ ಸೇರಿದಂತೆ ಹಲವರ ತಾರಾ ಬಳಗವಿದೆ. ರಾಷ್ಟ್ರಕೂಟ ಪಿಚ್ಚರ್ ಬ್ಯಾನರ್ ನಲ್ಲಿ ವಿ ರವಿಕುಮಾರ್ ಮತ್ತು ಶಾಮ್ ಶುದ್ದಿನ್ ಬಂಡವಾಳ ಹೂಡಿದ್ದಾರೆ. ಸುಜಿತ್ ನಾಯಕ್ ಸಂಕಲನ, ಮಾಸ್ ಮಾದ ಸಾಹಸ ನಿರ್ದೇಶನವಿದೆ.