
ರಾಮನಗರ: ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಬೆಂಬಲಿಗರು ನೀಡಿದ್ದ ಗಿಫ್ಟ್ ಕಾರ್ಡ್ ಗೆ ಪ್ರತಿಯಾಗಿ ಮತದಾರರಿಗೆ ಗಿಫ್ಟ್ ಬಾಕ್ಸ್ ಗಳನ್ನು ತಲುಪಿಸಲಾಗುತ್ತಿದೆ.
ರಾಮನಗರ ಜಿಲ್ಲೆಯ ಕುದೂರು ಗ್ರಾಮದ ಮತದಾರರಿಂದ ಗಿಫ್ಟ್ ಕಾರ್ಡ್ ಗಳನ್ನು ಪಡೆದುಕೊಂಡು ಗಿಫ್ಟ್ ಬಾಕ್ಸ್ ನೀಡಲಾಗುತ್ತಿದೆ. ವಿಧಾನಸಭೆ ಚುನಾವಣೆ ಮತದಾನ ದಿನ ಕಾಂಗ್ರೆಸ್ ಅಭ್ಯರ್ಥಿಗಳ ಬೆಂಬಲಿಗರು ನೀಡಿದ ಗಿಫ್ಟ್ ಕಾರ್ಡುಗಳನ್ನು ಪಡೆದುಕೊಂಡು ಕಾಂಗ್ರೆಸ್ ಕಾರ್ಯಕರ್ತರೇ ಗಿಫ್ಟ್ ಬಾಕ್ಸ್ ಗಳನ್ನು ಮತದಾರರ ಮನೆ ಬಾಗಿಲಿಗೆ ತಲುಪಿಸುತ್ತಿದ್ದಾರೆ.
ಗಿಫ್ಟ್ ಬಾಕ್ಸ್ ಮೇಲೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು ಎಂದು ಬರೆದಿದ್ದು, ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್, ಸಂಸದ ಡಿ.ಕೆ. ಸುರೇಶ್, ಶಾಸಕ ಬಾಲಕೃಷ್ಣ ಅವರ ಫೋಟೋ ಇದೆ. ಕುಕ್ಕರ್, ಫ್ಯಾನ್ ಸೇರಿ ಐದು ವಸ್ತುಗಳು ಗಿಫ್ಟ್ ಬಾಕ್ಸ್ ನಲ್ಲಿ ಇವೆ ಎನ್ನಲಾಗಿದೆ.