ಹೌರಾದಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದ ಮೇಲೆ ಪಶ್ಚಿಮ ಬಂಗಾಳದ ಬಿಜೆಪಿ ಶಾಸಕ ಸಬ್ಯಸಾಚಿ ಘೋಷ್ ಅವರನ್ನು ಶುಕ್ರವಾರ ಬಂಧಿಸಲಾಗಿದೆ.
ಸಂದೇಶ್ಖಾಲಿಯಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ವಿರುದ್ಧ ಬಿಜೆಪಿಯ ದಾಳಿಯ ನಡುವೆ ಈ ಘಟನೆ ನಡೆದಿದೆ. ಟಿಎಂಸಿ ನಾಯಕ ಶೇಖ್ ಶಹಜಹಾನ್ ಅವರ ಸಹಾಯಕರು ತಮ್ಮನ್ನು ಲೈಂಗಿಕವಾಗಿ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಹಲವಾರು ಮಹಿಳೆಯರು ಆರೋಪಿಸಿದ್ದಾರೆ.
ಬಿಜೆಪಿ ವಿರುದ್ಧ ದಾಳಿಯನ್ನು ತೀವ್ರಗೊಳಿಸಿರುವ ಟಿಎಂಸಿ ಈ ಬಗ್ಗೆ ಪೋಸ್ಟ್ ಮಾಡಿದೆ. @BJP4Bengal ಮುಖಂಡ ಸಬ್ಯಸಾಚಿ ಘೋಷ್ ಹೌರಾದ ಸಂಕ್ರೈಲ್ನಲ್ಲಿರುವ ತನ್ನ ಹೋಟೆಲ್ ನಲ್ಲಿ ಅಪ್ರಾಪ್ತ ಬಾಲಕಿಯರ ವೇಶ್ಯಾವಾಟಿಕೆ ದಂಧೆಯನ್ನು ನಡೆಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ. ಪೊಲೀಸರು 11 ಆರೋಪಿಗಳನ್ನು ಬಂಧಿಸಿದ್ದು, 6 ಸಂತ್ರಸ್ತರನ್ನು ಸ್ಥಳದಿಂದ ರಕ್ಷಿಸಿದ್ದಾರೆ. ಬಿಜೆಪಿ ಪಿಂಪ್ ಗಳನ್ನು ರಕ್ಷಿಸುತ್ತಿದೆ ಎಂದು ಎಂದು ಹೇಳಿದೆ.
.@BJP4Bengal leader Sabyasachi Ghosh caught running a PROSTITUTION RACKET of MINOR GIRLS in his hotel in Howrah's Sankrail.
The Police arrested 11 accused & rescued 6 victims from the spot.
THIS IS BJP. They don't protect BETIS, they protect PIMPS!https://t.co/IUxN8iUH7y
— All India Trinamool Congress (@AITCofficial) February 23, 2024
ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) ನ ಹಲವಾರು ರಾಜಕಾರಣಿಗಳು ವ್ಯವಸ್ಥಿತ ಲೈಂಗಿಕ ಶೋಷಣೆ ಮತ್ತು ಭೂ ಕಬಳಿಕೆ ಮಾಡುತ್ತಿದ್ದಾರೆ ಎಂದು ಸಂದೇಶ್ಖಾಲಿಯ ಹಲವಾರು ಮಹಿಳೆಯರು ಆರೋಪಿಸಿದ್ದಾರೆ. ನೆರೆಹೊರೆಯ ಜಿಲ್ಲಾ ಪರಿಷತ್ ಸದಸ್ಯ ಶೇಖ್ ಶಹಜಹಾನ್ ಮುಖ್ಯ ಅಪರಾಧಿ ಎಂದು ಮಹಿಳೆಯರು ತಿಳಿಸಿದ್ದಾರೆ.

