ಬೆಂಗಳೂರು : ನಟ ದರ್ಶನ್ ಹಾಗೂ ನಿರ್ಮಾಪಕ ಉಮಾಪತಿ ನಡುವಿನ ವಾಕ್ಸಮರ ಮುಂದುವರೆದಿದೆ. ದರ್ಶನ್ ನೀಡಿರುವ ತಗಡು ಹೇಳಿಕೆಗೆ ನಿರ್ಮಾಪಕ ಉಮಾಪತಿ ಟಾಂಗ್ ನೀಡಿದ್ದಾರೆ.
ಈ ಬಗ್ಗೆ ಸುದ್ದಿಗಾರರ ಜೊತೆ ಮಾತನಾಡಿರುವ ಉಮಾಪತಿ ದೇಹದಲ್ಲಿ ತೂಕ ಇದ್ದರೆ ಸಾಲದು, ಮಾತಿನಲ್ಲೂ ತೂಕ ಇರಬೇಕು ಎಂದು ನಟ ದರ್ಶನ್ ಗೆ ಟಾಂಗ್ ನೀಡಿದ್ದಾರೆ. ಅವರು ಹೊಟ್ಟೆ ತುಂಬಿರುವವರು ಏನೇನೋ ಮಾತನಾಡುತ್ತಾರೆ, ನಾವೆಲ್ಲಾ ಹಸಿದವರು ಮೂಲೆಯಲ್ಲಿ ಇರುತ್ತೇವೆ. ನಾವೆಲ್ಲಾ ಸಿನಿಮಾದ ಮೂಲಕ ಒಂದೊಳ್ಳೆ ಮೆಸೇಜ್ ಕೊಡಬೇಕು, ಆ ಕೆಲಸ ಮಾಡಬೇಕು. ಈ ತರಹದ ಮೆಸೇಜ್ ಕೋಡೋದಲ್ಲ ಎಂದರು.
ನಿರ್ಮಾಪಕರು ದೇವರು ಎಂದು ಡಾ.ರಾಜ್ ಕುಮಾರ್ ಹೇಳಿದ್ದರು. ಆ ಮಾತುಗಳನ್ನು ನಾವು ನೆನಪಿಟ್ಟುಕೊಳ್ಳಬೇಕು ಎಂದು ಹೇಳಿದ್ದಾರೆ. ಒಬ್ಬ ನಿರ್ಮಾಪಕನಿಗೆ ಹೇಗೆ ಗೌರವ ಕೊಡಬೇಕು ಎಂದು ನಮ್ಮ ಯಜಮಾನರನ್ನು ನೋಡಿ ಮತ್ತು ಅವರ ಮಕ್ಕಳನ್ನು ನೋಡಿ ಕಲಿಯಬೇಕು. ಅಣ್ಣಾವ್ರ ಕುಟುಂಬದ ಮೇಲೆ ದಿನದಿಂದ ದಿನಕ್ಕೆ ಗೌರವ ಹೆಚ್ಚಾಗುತ್ತಿದೆ ಎಂದರು.
ಏನಿದು ವಿವಾದ..?
ಕಾಟೇರ’ ಸಿನಿಮಾ 50 ದಿನಗಳನ್ನು ಯಶಸ್ವಿಯಾಗಿ ಪೂರೈಸಿದ ಹಿನ್ನಲೆಯಲ್ಲಿ ನಡೆದ ಸಂಭ್ರಮಾಚರಣೆಯ ಕಾರ್ಯಕ್ರಮದಲ್ಲಿ ನಟ ದರ್ಶನ್ ತಗಡು ಎಂಬ ಪದ ಬಳಸಿ ವಾಗ್ಧಾಳಿ ನಡೆಸಿದ್ದರು.
“ಅಯ್ಯೋ ತಗಡೇ ರಾಬರ್ಟ್ ಕಥೆ ನಿನಗೆ ಕೊಟ್ಟಿದ್ದು ನಾವು. ಕೊಟ್ಟಿದ್ದು, ಮಾಡಿದ್ದನ್ನ ಹೇಳಬಾರದು. ಇಂತಹ ಒಳ್ಳೆ ಕಥೆ ಮತ್ತೆ ಯಾಕ್ ಬಿಟ್ಟೆ ನೀನು?, ಕಾಟೇರ ಟೈಟಲ್ ಕೊಟ್ಟಿದ್ದೇ ನಾನು. ಯಾಕೆ ಪದೇ ಪದೇ ನಮ್ಮ ಹತ್ರಾನೆ ಬಂದು ಬಂದು ಗುಮ್ಮುಸ್ಕೋತೀಯಾ.ಎಲ್ಲೋ ಇದ್ದಿಯಾ, ಚೆನ್ನಾಗಿದ್ದೀಯಾ. ಅಲ್ಲೇ ಇರು” ಎಂದಿದ್ದರು.