
ಸ್ಯಾಂಡಲ್ವುಡ್ನ ಪ್ರತಿಭಾವಂತ ನಟ ಹರೀಶ್ ರಾಜ್ ನಿರ್ದೇಶಿಸಿ ನಾಯಕನಾಗಿ ಅಭಿನಯಿಸಿರುವ ‘ಪ್ರೇತ’ ಚಿತ್ರವನ್ನು ಇಂದು ಕನ್ನಡ ಸೇರಿದಂತೆ ಬೇರೆ ಬೇರೆ ಭಾಷೆಗಳಲ್ಲಿ ಬಿಡುಗಡೆ ಮಾಡಲಾಗಿದೆ. ಈಗಾಗಲೇ ತನ್ನ ಟ್ರೈಲರ್ ನಿಂದಲೇ ಸಿನಿ ಪ್ರೇಕ್ಷಕರ ಗಮನ ಸೆಳೆದಿರುವ ಈ ಸಿನಿಮಾದಲ್ಲಿ ಹರೀಶ್ ರಾಜ್ ಸೇರಿದಂತೆ ಐರಾ ಶೆಟ್ಟಿ, ವೆಂಕಟೇಶ್, ಅಮೂಲ್ಯ ಭಾರದ್ವಾಜ್, ಹಾಗೂ ಅಮಿತ್, ಸುನೀತಾ, ಪುರುಷೋತ್ತಮ್, ತಿಲಕ್, ಉಮೇಶ್, ಜಯ ತೆರೆ ಹಂಚಿಕೊಂಡಿದ್ದಾರೆ.
ಈ ಚಿತ್ರವನ್ನು ಹರೀಶ್ ರಾಜ್ ಅವರೇ ತಮ್ಮ ಹರೀಶ್ ಪ್ರೊಡಕ್ಷನ್ ಬ್ಯಾನರ್ ನಲ್ಲಿ ನಿರ್ಮಾಣ ಮಾಡಿದ್ದು, ಪ್ರವೀಣ್ ಶ್ರೀನಿವಾಸ್ ಮೂರ್ತಿ ಸಂಗೀತ ಸಂಯೋಜನೆ ನೀಡಿದ್ದಾರೆ. ಜೀವನ್ ಪ್ರಕಾಶ್ ಸಂಕಲನವಿದ್ದು, ಕಿರಣ್ ಆರ್ ಹೆಮ್ಮಿಗೆ ಡೈಲಾಗ್ ಬರೆದಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಈ ವರ್ಷ ಬಿಡುಗಡೆಯಾಗುತ್ತಿರುವ ಮೊದಲ ಹಾರರ್ ಚಿತ್ರ ಇದಾಗಿದೆ.