ವಾರಣಾಸಿ : ಪ್ರಧಾನಿ ನರೇಂದ್ರ ಮೋದಿ ಅವರು ರಾತ್ರಿ 11 ಗಂಟೆ ಸುಮಾರಿಗೆ ವಾರಣಾಸಿಯ ಶಿವಪುರ-ಫುಲ್ವಾರಿಯಾ-ಲಹರ್ತಾರಾ ರಸ್ತೆಯನ್ನು ಪರಿಶೀಲಿಸಿದ್ದಾರೆ.
ಈ ಮಾರ್ಗವನ್ನು ಇತ್ತೀಚೆಗೆ ಉದ್ಘಾಟಿಸಲಾಗಿದ್ದು. ವಾರಣಾಸಿ ವಿಮಾನ ನಿಲ್ದಾಣ, ಲಕ್ನೋ, ಅಜಂಗಢ ಮತ್ತು ಗಾಜಿಪುರ ಕಡೆಗೆ ಪ್ರಯಾಣಿಸಲು ಬಯಸುವ ನಗರದ ದಕ್ಷಿಣ ಭಾಗದಲ್ಲಿ ವಾಸಿಸುವ ಸುಮಾರು 5 ಲಕ್ಷ ಜನರಿಗೆ ಈ ರಸ್ತೆ ಸಹಾಯ ಮಾಡಿದೆ.
ಈ ಬಗ್ಗೆ ನೇರ ಮಾಹಿತಿ ಪಡೆಯಲು ಪ್ರಧಾನಿ ಮೋದಿ ಅವರು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೊಂದಿಗೆ ಮಧ್ಯರಾತ್ರಿ ಅಲ್ಲಿಗೆ ತೆರಳಿ ರಸ್ತೆಯನ್ನು ಪರಿಶೀಲನೆ ನಡೆಸಿದ್ದಾರೆ.
ಇದಲ್ಲದೆ, 360 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾದ ಈ ರಸ್ತೆ ಬನಾರಸ್ ಹಿಂದೂ ವಿಶ್ವವಿದ್ಯಾಲಯ ಮತ್ತು ವಾರಣಾಸಿ ವಿಮಾನ ನಿಲ್ದಾಣದ ನಡುವಿನ ಪ್ರಯಾಣದ ಸಮಯವನ್ನು 75 ನಿಮಿಷಗಳಿಂದ 45 ನಿಮಿಷಗಳಿಗೆ ಇಳಿಸುತ್ತದೆ. ಅಂತೆಯೇ, ಇದು ಲಹರ್ತಾರಾ ಮತ್ತು ಕಚಾರಿ ನಡುವಿನ ಪ್ರಯಾಣದ ಸಮಯವನ್ನು 30 ನಿಮಿಷಗಳಿಂದ 15 ನಿಮಿಷಗಳಿಗೆ ಕಡಿಮೆ ಮಾಡುತ್ತದೆ.