ನವದೆಹಲಿ: ಆದಾಯ ತೆರಿಗೆ ಇಲಾಖೆಯು ಕಾಂಗ್ರೆಸ್ ಬ್ಯಾಂಕ್ ಖಾತೆಯಿಂದ 65 ಕೋಟಿ ರೂ. ಹಿಂಪಡೆದಿದೆ. ಕಾಂಗ್ರೆಸ್ ಖಾತೆಯಲ್ಲಿದ್ದ ಒಟ್ಟು 115 ಕೋಟಿ ರೂಪಾಯಿಗಳ ತೆರಿಗೆಯಲ್ಲಿ 65 ಕೋಟಿ ರೂಪಾಯಿಗಳನ್ನು ಆದಾಯ ತೆರಿಗೆ ಇಲಾಖೆ ಮಂಗಳವಾರ ಪಡೆದಿದೆ.
ಕಾಂಗ್ರೆಸ್ ಪಕ್ಷದ ಬ್ಯಾಂಕ್ ಖಾತೆಯಿಂದ ವಸೂಲಿ ಮಾಡಿದ್ದು, 65 ಕೋಟಿ ವಸೂಲಾತಿ ವಿರುದ್ಧ ಕಾಂಗ್ರೆಸ್ ಪಕ್ಷವು ಆದಾಯ ತೆರಿಗೆ ಮೇಲ್ಮನವಿ ನ್ಯಾಯಾಧಿಕರಣದ ಮೊರೆ ಹೋಗಿ ಆದಾಯ ತೆರಿಗೆ ಇಲಾಖೆಯ ವಸೂಲಾತಿ ಕ್ರಮದ ವಿರುದ್ಧ ದೂರು ದಾಖಲಿಸಿದೆ.
ಕಾಂಗ್ರೆಸ್ ಪಕ್ಷವು ತನ್ನ ವಕೀಲರ ಮೂಲಕ ತನ್ನ ದೂರಿನಲ್ಲಿ ಆದಾಯ ತೆರಿಗೆ ಇಲಾಖೆಯು ಪೀಠದ ಮುಂದೆ ನಿಗದಿತ ವಿಚಾರಣೆಯ ಫಲಿತಾಂಶಕ್ಕಾಗಿ ಕಾಯದೆ ಬ್ಯಾಂಕ್‌ಗಳ ಬಳಿ ಇರುವ ಕೆಲವು ಬಾಕಿಗಳನ್ನು ಎನ್‌ಕ್ಯಾಶ್ ಮಾಡುವ ಮೂಲಕ ತನ್ನ ಹೊಣೆಗಾರಿಕೆಯನ್ನು ಜಾರಿಗೊಳಿಸಿದೆ ಎಂದು ಹೇಳಿದೆ.
ಕಾಂಗ್ರೆಸ್ ಪಕ್ಷದ ಸ್ಟೇ ಅರ್ಜಿ ಇತ್ಯರ್ಥವಾಗುವವರೆಗೆ ಆದಾಯ ತೆರಿಗೆ ಇಲಾಖೆ ಮುಂದುವರಿಯಬಾರದು ಎಂದು ಕಾಂಗ್ರೆಸ್ ಮನವಿ ಮಾಡಿದೆ. ವಿಚಾರಣೆ ಕೈಗೆತ್ತಿಕೊಳ್ಳುವವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ನ್ಯಾಯಪೀಠ ಸೂಚಿಸಿದೆ.