ಬೆಂಗಳೂರು : ರಾಜ್ಯದಲ್ಲಿ ಸ್ಥಗಿತಗೊಂಡಿದ್ದ ಕೊಬ್ಬರಿ ಖರೀದಿ ಮತ್ತು ನೋಂದಣಿ ಪ್ರಕ್ರಿಯೆಯನ್ನು ಇಂದಿನಿಂದಲೇ ಪುನರಾರಂಭಿಸಲಾಗುವುದು ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ತಿಳಿಸಿದ್ದಾರೆ.
ನಾಫೆಡ್ ಮೂಲಕ ಕೊಬ್ಬರಿ ಖರೀದಿಗಾಗಿ ನಡೆದ ನೋಂದಣಿಯಲ್ಲಿ ಅಕ್ರಮ ನಡೆದಿರುವುದು ದೃಢಪಟ್ಟಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರವು ಹಳೆ ನೋಂದಣಿಯನ್ನು ರದ್ದುಪಡಿಸಿ ಆದೇಶ ಹೊರಡಿಸಿದೆ.
ರೈತರಿಂದ ಒಟ್ಟು 62,500 ಮೆ.ಟನ್ ಕೊಬ್ಬರಿಯನ್ನು ಕ್ವಿಂಟಾಲ್ಗೆ ರೂ. 12,000 ಬೆಂಬಲ ಬೆಲೆಯೊಂದಿಗೆ ಕೇಂದ್ರ ಸರಕಾರ ಖರೀದಿಸಲಿದೆ. ರಾಜ್ಯ ಸರಕಾರ 1500 ರೂ. ಪ್ರೋತ್ಸಾಹಧನ ನೀಡುವುದರಿಂದ ರೈತರಿಗೆ 13,500 ರೂ. ದೊರೆಯುತ್ತದೆ. ಒಬ್ಬ ರೈತನಿಂದ ಈ ಹಿಂದೆ ಇದ್ದ ಗರಿಷ್ಠ 20 ಕ್ವಿಂಟಾಲ್ ಬದಲಿಗೆ 15 ಕ್ವಿಂಟಾಲ್ ಕೊಬ್ಬರಿ ಮಾತ್ರ ಖರೀದಿ ಮಾಡಲಾಗುತ್ತದೆ. ನಾಫೆಡ್ ಕೊಬ್ಬರಿ ಖರೀದಿಗಾಗಿ ರೈತರ ಮರು ನೋಂದಣಿ ಬುಧವಾರದಿಂದಲೇ ಆರಂಭವಾಗಿದೆ.