HomeKarnatakaBIG NEWS: ತಾಯಿ ಹಾಗೂ ನವಜಾತ ಶಿಶುವಿನ ಆರೋಗ್ಯಕ್ಕಾಗಿ ತಂತ್ರಾಜ್ಞಾನ ಬಳಸಿ ಹೊಸ ಯೋಜನೆ ಜಾರಿ;...

BIG NEWS: ತಾಯಿ ಹಾಗೂ ನವಜಾತ ಶಿಶುವಿನ ಆರೋಗ್ಯಕ್ಕಾಗಿ ತಂತ್ರಾಜ್ಞಾನ ಬಳಸಿ ಹೊಸ ಯೋಜನೆ ಜಾರಿ; ಇನ್ಫೊಸಿಸ್ ಜೊತೆ ಒಪ್ಪಂದ

ಬೆಂಗಳೂರು: ತಾಯಿ ಹಾಗೂ ನವಜಾತ ಶಿಶುಗಳ ಆರೋಗ್ಯ ಕಾಳಜಿಗಾಗಿ ಆರೋಗ್ಯ ಇಲಾಖೆ ರಾಜ್ಯದ ಮಾಹಿತಿ ಮತ್ತು ತಂತ್ರಜ್ಞಾನ ಕಂಪನಿ ಇನ್ಫೋಸಿಸ್ ಜೊತೆ ಒಪ್ಪಂದ ಮಾಡಿಕೊಂಡಿದೆ.

ಈ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾಹಿತಿ ನೀಡಿದ್ದು, ಸಿ-ಕ್ಯಾಂಪ್ ಮತ್ತು ಆರೋಗ್ಯ ಇಲಾಖೆ ಒಪ್ಪಂದ ಮಾಡಿಕೊಂಡಿದ್ದು, ತಾಯಿ ಹಾಗೂ ನವಜಾತ ಶಿಶುಗಳ ಆರೋಗ್ಯದ ಕಾಳಜಿ ನಿಟ್ಟಿನಲ್ಲಿ ಹೊಸ ತಂತ್ರಜ್ಞಾನ ಬಳಸಿ ಯೋಜನೆ ಜಾರಿಗೆ ತರಲಾಗಿದೆ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಗುವಿನ ಹೃದಯ ಬಡಿತದ ಬಗ್ಗೆ, ಗರ್ಭದಲ್ಲಿರುವ ಶಿಶುವಿನ ಹೃದಯ ಬಡಿತದ ಬಗ್ಗೆ ತಂತ್ರಜ್ಞಾನ ಮಾಹಿತಿ ನೀಡಲಿದೆ. ಪ್ರಾಯೋಗಿಕವಾಗಿ 2 ಜಿಲ್ಲೆಗಳಲ್ಲಿ ಈ ಯೋಜನೆ ಜಾರಿಗೆ ತರಲಾಗಿದೆ. ಮುಂದಿನ ದಿನಗಳಲ್ಲಿ 8 ಜಿಲ್ಲೆಗಳಲ್ಲಿ ಯೋಜನೆ ವಿಸ್ತರಿಸಲಾಗುವುದು ಎಂದು ತಿಳಿಸಿದರು.

For Latest News Updates, Join Our Whatsapp Community🚩
RELATED ARTICLES

Most Popular