ಅನೇಕ ಜನರು ಚಿಕ್ಕವರಿದ್ದಾಗ ಚೆನ್ನಾಗಿ ಸಂಪಾದಿಸುತ್ತಾರೆ ಆದರೆ ಉಳಿಸಲು ಸಾಧ್ಯವಿಲ್ಲ. ಈ ಕಾರಣದಿಂದಾಗಿ, ನೀವು ವೃದ್ಧಾಪ್ಯದಲ್ಲಿ ಸಾಕಷ್ಟು ತೊಂದರೆ ಅನುಭವಿಸುತ್ತೀರಿ. ಈ ವಯಸ್ಸಿನಲ್ಲಿ, ಅನೇಕ ಜನರು ಆದಾಯ ಗಳಿಸಲು ಸಾಧ್ಯವಾಗುವುದಿಲ್ಲ. ಅದಕ್ಕಾಗಿಯೇ ನೀವು ಸಂಪಾದನೆಯ ವಯಸ್ಸಿನಲ್ಲಿದ್ದಾಗ ಉಳಿತಾಯ ಮಾಡುವ ಅಭ್ಯಾಸವನ್ನು ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಭವಿಷ್ಯದಲ್ಲಿ ಸಾಕಷ್ಟು ತೊಂದರೆ ಉಂಟಾಗುತ್ತದೆ.
ಗಳಿಸಿದ ಮೊತ್ತವನ್ನು ಉಳಿಸುವುದು ಕಷ್ಟದ ಕೆಲಸ ಆದರೆ ಅದರಲ್ಲಿ ಸ್ವಲ್ಪ ಉಳಿಸಬಹುದು. ಪಿಂಚಣಿ ಯೋಜನೆಗಳು ಇದಕ್ಕೆ ಅತ್ಯುತ್ತಮವಾಗಿವೆ. ಏಕೆಂದರೆ ಇದರಲ್ಲಿ ಉಳಿತಾಯ ಮಾಡುವುದರಿಂದ ಅರವತ್ತು ವರ್ಷಗಳ ನಂತರ ನೀವು ಯಾರ ಮೇಲೂ ಅವಲಂಬಿತರಾಗುವುದಿಲ್ಲ. ಪಿಂಚಣಿ ಮಾಸಿಕವಾಗಿ ಬರುವುದರಿಂದ ಯಾವುದೇ ಹಣಕಾಸಿನ ತೊಂದರೆಗಳು ಇರುವುದಿಲ್ಲ. ಉಳಿದ ಜೀವನವನ್ನು ಆರಾಮವಾಗಿ ಕಳೆಯುವಿರಿ.
ಅಟಲ್ ಪಿಂಚಣಿ ಯೋಜನೆಯಡಿ 18 ರಿಂದ 40 ವರ್ಷದೊಳಗಿನವರು ಪ್ರತಿ ತಿಂಗಳ ಹಣ ಹೂಡಿಕೆ ಮಾಡಿದ್ರೆ 60 ವರ್ಷಗಳ ನಂತರ ಪ್ರತಿ ತಿಂಗಳು 5,000 ರೂ.ಗಳ ಪಿಂಚಣಿ ಪಡೆಯಬಹುದು.
ನೀವು 18 ನೇ ವಯಸ್ಸಿನಲ್ಲಿ ಈ ಯೋಜನೆಗೆ ಅರ್ಜಿ ಸಲ್ಲಿಸಿದರೆ, ನೀವು ದಿನಕ್ಕೆ ಕೇವಲ 7 ರೂ.ಗಳನ್ನು ಪಾವತಿಸಬೇಕಾಗುತ್ತದೆ. ಇದರರ್ಥ ನೀವು ತಿಂಗಳಿಗೆ 210 ರೂ.ಗಳನ್ನು ಪಾವತಿಸಬೇಕಾಗುತ್ತದೆ. ನೀವು 60 ವರ್ಷ ವಯಸ್ಸಾಗುವವರೆಗೆ ಪ್ರೀಮಿಯಂ ಪಾವತಿ ಮುಂದುವರಿಯಬೇಕು. ಆದಾಗ್ಯೂ, ಪ್ರೀಮಿಯಂ ವಯಸ್ಸಿಗೆ ಅನುಗುಣವಾಗಿ ಹೆಚ್ಚಾಗುತ್ತದೆ. ನೀವು ಹತ್ತಿರದ ಬ್ಯಾಂಕಿಗೆ ಹೋಗಿ ಪ್ರಧಾನ ಮಂತ್ರಿ ಅಟಲ್ ಪಿಂಚಣಿ ಯೋಜನೆಗೆ ಸೇರಬಹುದು.