ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ಕೇರಳ ಗಡಿಭಾಗದಲ್ಲಿ ಅನೇಕ ವರ್ಷಗಳಿಂದ ಆನೆಗಳು ನಿರಂತರ ದಾಳಿ ಮಾಡುತ್ತಿವೆ. ಇದಕ್ಕೆ ಕೇರಳ ಸರ್ಕಾರದಿಂದ ಪರಿಹಾರ ತರಿಸಬಹುದೇ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಸುಳ್ಯ ತಾಲೂಕಿನ ಕೇರಳ ಗಡಿಭಾಗದಲ್ಲಿ ಆನೆಗಳ ನಿರಂತರ ದಾಳಿಯಿಂದ ಸಾವಿರಾರು ಎತರೆ ಕೃಷಿ ಬೆಳೆ ನಾಶವಾಗುತ್ತಿದೆ. ಕೇರಳ ಭಾಗದಿಂದ ಈ ಆನೆಗಳು ಬರುತ್ತವೆ. ಪರಿಹಾರವನ್ನು ಕೇರಳ ಸರ್ಕಾರದಿಂದ ತರಿಸಿಕೊಡಲು ನಿಮ್ಮ ರಾಹುಲ್ ಗಾಂಧಿ, ಕೆ.ಸಿ. ವೇಣುಗೋಪಾಲ್ ಅವರಿಗೆ ಪತ್ರ ಬರೆಯಬಹುದೇ ಎಂದು ಪ್ರಶ್ನಿಸಿದ್ದಾರೆ.
ಕೇರಳದ ವಯನಾಡಿನಲ್ಲಿ ಆನೆ ತುಳಿತದಿಂದ ಮೃತಪಟ್ಟ ವ್ಯಕ್ತಿಗೆ ಕರ್ನಾಟಕದ ತೆರಿಗೆ ಹಣದಿಂದ ಪರಿಹಾರ ನೀಡುವುದು ಎಷ್ಟರಮಟ್ಟಿಗೆ ಸರಿ ಎಂದು ಸದಾನಂದ ಗೌಡ ಪ್ರಶ್ನಿಸಿದ್ದಾರೆ.