ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ 2024 ರ ಋತುವು ಮಾರ್ಚ್ 22 ರಿಂದ ಪ್ರಾರಂಭವಾಗುವ ಸಾಧ್ಯತೆಯಿದೆ ಎಂದು ಲೀಗ್ ಅಧ್ಯಕ್ಷ ಅರುಣ್ ಧುಮಾಲ್ ಹೇಳಿದ್ದಾರೆ. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಚುನಾವಣೆ ನಡೆಯಲಿದ್ದು, ಐಪಿಎಲ್ 17 ನೇ ಆವೃತ್ತಿಯ ವೇಳಾಪಟ್ಟಿಯನ್ನು ಇನ್ನೂ ಅಧಿಕೃತವಾಗಿ ಬಿಡುಗಡೆ ಮಾಡಿಲ್ಲ.
ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಧುಮಾಲ್, ಪಂದ್ಯಾವಳಿಯ ಮೊದಲ 15 ದಿನಗಳ ವೇಳಾಪಟ್ಟಿಯನ್ನು ಮಾತ್ರ ಆರಂಭದಲ್ಲಿ ಘೋಷಿಸಲಾಗುವುದು, ಆದರೆ ಉಳಿದ ರೋಸ್ಟರ್ ಅನ್ನು ಸಾರ್ವತ್ರಿಕ ಚುನಾವಣಾ ದಿನಾಂಕಗಳನ್ನು ಘೋಷಿಸಿದ ನಂತರವೇ ನಿರ್ಧರಿಸಲಾಗುವುದು ಎಂದು ಬಹಿರಂಗಪಡಿಸಿದರು. ಲೋಕಸಭಾ ಚುನಾವಣೆಯ ದಿನಾಂಕಗಳನ್ನು ಮುಂದಿನ ತಿಂಗಳ ಆರಂಭದಲ್ಲಿ ಘೋಷಿಸುವ ನಿರೀಕ್ಷೆಯಿದೆ.
“ನಾವು ಮಾರ್ಚ್ 22ರಂದು ಟೂರ್ನಿಯ ಆರಂಭವನ್ನು ಎದುರು ನೋಡುತ್ತಿದ್ದೇವೆ. ಇಡೀ ಪಂದ್ಯಾವಳಿ ಭಾರತದಲ್ಲಿ ನಡೆಯಲಿದೆ, “ಎಂದು ಧುಮಾಲ್ ಹೇಳಿದರು. 2009 ರಲ್ಲಿ ಮಾತ್ರ, ಐಪಿಎಲ್, ಸಂಪೂರ್ಣವಾಗಿ ವಿದೇಶದಲ್ಲಿ (ದಕ್ಷಿಣ ಆಫ್ರಿಕಾ) ನಡೆದರೆ, 2014 ರ ಆವೃತ್ತಿಯನ್ನು ಸಾರ್ವತ್ರಿಕ ಚುನಾವಣೆಗಳಿಂದಾಗಿ ಯುಎಇಯಲ್ಲಿ ನಡೆಸಲಾಯಿತು.