ಕೋಟಾ: ಕಳೆದ 9 ದಿನಗಳಿಂದ ರಾಜಸ್ಥಾನದ ಕೋಟಾದಿಂದ ನಾಪತ್ತೆಯಾಗಿದ್ದ ವಿದ್ಯಾರ್ಥಿ ಅರಣ್ಯ ಪ್ರದೇಶದಲ್ಲಿ ಶವಾಗಿ ಪತ್ತೆಯಾಗಿರುವ ಘಟನೆ ನಡೆದಿದೆ.
ಜೆಇಇ ಪ್ರವೇಶ ಪರೀಕ್ಷೆಗಾಗಿ ಕೋಟಾದಲ್ಲಿ ತಯಾರಿ ನಡೆಸುತ್ತಿದ್ದ 16 ವರ್ಷದ ವಿದ್ಯಾರ್ಥಿ ರಚಿತ್ ಸೋಂಧಿಯಾ ಫೆ.11ರಿಂದ ಕೊಟಾ ಕೋಚೀಂಗ್ ಸೆಂಟರ್ ಹಾಸ್ಟೇಲ್ ನಿಂದ ನಾಪತ್ತೆಯಾಗಿದ್ದ.
ಆದರೆ ಈಗ ಗಾರ್ಡಿಯಾ ಮಹಾದೇವ ಮಂದಿರದ ಬಳಿ ಅರಣ್ಯ ಪ್ರದೇಶದಲ್ಲಿ ವಿದ್ಯಾರ್ಥಿ ಶವ ಪತ್ತೆಯಾಗಿದೆ. ವಿದ್ಯಾರ್ಥಿ ಬಗ್ಗೆ ಹುಡುಕಾಟ ನಡೆಸಿದಾಗ ಸಿಸಿಟಿವಿ ಕ್ಯಾಮರಾ ಪರಿಶೀಲಿಸಿದ ಪೊಲಿಸರಿಗೆ ವಿದ್ಯಾರ್ಥಿ ಕೋಚಿಂಗ್ ಸೆಮ್ತರ್ ಹಾಸ್ಟೇಲ್ ನಿಂದ ತೆರಳಿರುವುದು ಹಾಗೂ ಕ್ಯಾಬ್ ನಲ್ಲಿ ದೇವಾಲಯದ ಪ್ರದೇಶಕ್ಕೆ ಹೋಗಿರುವುದು ಗೊತ್ತಾಗಿದೆ.
ಈ ಹಿನ್ನೆಲೆಯಲ್ಲಿ ಅರಣ್ಯ ಪ್ರದೇಶದಲ್ಲಿ ಹುಡುಕಾಟ ನಡೆಸಿದಾಗ ವಿದ್ಯಾರ್ಥಿಯ ಮೃತದೇಹ ಪತ್ತೆಯಾಗಿದೆ. ದೇವಸ್ಥಾನದ ಬಳಿ ಆತನ ವ್ಯಾಗ್, ಮೊಬೈಲ್, ಕೊಠಡಿಯ ಕೀ ಸಿಕ್ಕಿದ್ದು, ವಿದ್ಯಾರ್ಥಿಯ ಹಾಸ್ಟೇಲ್ ಕೊಠಡಿಯಲ್ಲಿ ದೇವಸ್ಥಾನಕ್ಕೆ ಹೋಗುವ ಬಗ್ಗೆ ಬರೆದಿಟ್ಟಿದ್ದ ಟಿಪ್ಪಣಿ ಪತ್ತೆಯಾಗಿದೆ, ಎಲ್ಲವನ್ನು ವಶ ಪಡಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.
ಮಧ್ಯಪ್ರದೇಶ ಮೂಲದ ರಚಿತ್ ಕಳೆದ ಒಂದು ವರ್ಷದಿಂದ ಕೋಟಾದಲ್ಲಿ ಕೋಚಿಂಗ್ ಪಡೆದುಕೊಳ್ಳುತ್ತಿದ್ದ ಎಂದು ತಿಳಿದುಬಂದಿದೆ.