ಬೆಂಗಳೂರು: ದೇವಸ್ಥಾನಗಳ ಆದಾಯವನ್ನು ದೇವಾಲಯಗಳ ಅಭಿವೃದ್ಧಿಗೆ ಬಳಸಬೇಕು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅಗ್ರಹಿಸಿದ್ದಾರೆ.
ವಿಧಾನಸಭೆಯಲ್ಲಿ ಮಾತನಾಡಿದ ಅವರು, ದೇವಸ್ಥಾನಗಳ ಆದಾಯವನ್ನು ಸರ್ಕಾರ ತೆಗೆದುಕೊಳ್ಳುತ್ತಿದೆ. ದೇವಸ್ಥಾನ ಆದಾಯ ಗ್ಯಾರಂಟಿ ಯೋಜನೆಗೆ ಬಳಕೆ ಮಾಡಲಾಗುತ್ತಿದೆ. ‘ನಮ್ಮ ತೆರಿಗೆ ನಮ್ಮ ಹಕ್ಕು’ ಎಂದು ದೆಹಲಿ ಚಲೋ ಮಾಡಿದ್ದರು. ಇಲ್ಲಿ ‘ನಮ್ಮ ದೇವರು ನಮ್ಮ ಹಣ ನಮ್ಮ ಹಕ್ಕು’ ಎಂದು ಹೇಳಿದ್ದಾರೆ.
ದೇವರಿಗೆ, ದೇವಸ್ಥಾನಕ್ಕೆ ಎಂದು ನಾವು ಕಾಣಿಕೆ, ಹಣ ಕೊಡುತ್ತೇವೆ. ನೀವು ವಕ್ಫ್ ಕಾಂಪೌಂಡ್ ಕಟ್ಟಲು, ಯಾರ್ಯಾರಿಗೆ ಬೇಕೋ ಹಾಗೆ ಕೊಡುತ್ತಿದ್ದೀರಿ. ಇದು ಯಾರಪ್ಪನ ಆಸ್ತಿ? ದೇಗುಲಗಳ ಮೇಲೆ ಮಾತ್ರ ಕಾನೂನು ಏಕೆ? ಮಸೀದಿ ಚರ್ಚ್ ಗಳ ಮೇಲೆ ಏಕೆ ನಿಮ್ಮ ಕಾನೂನು ಅನ್ವಯ ಆಗುವುದಿಲ್ಲ. ದೇಗುಲಗಳಲ್ಲಿ ಮುಕ್ತ ಆಡಳಿತ ಜಾರಿಗೆ ತರಬೇಕು ಎಂದು ಯತ್ನಾಳ್ ಒತ್ತಾಯಿಸಿದ್ದಾರೆ.