ಹಿಂದೂ ಧರ್ಮದಲ್ಲಿ ಭೋಲೆನಾಥ ಶಿವನ ಆರಾಧನೆ ಅದ್ಧೂರಿಯಾಗಿ ನಡೆಯುತ್ತದೆ. ಶಿವ ಭಕ್ತರ ಸಂಖ್ಯೆ ನಮ್ಮಲ್ಲಿ ಸಾಕಷ್ಟಿದೆ. ಪ್ರತಿ ವರ್ಷ ಶಿವರಾತ್ರಿಯಲ್ಲಿ ಜಾಗರಣೆ ಮಾಡಿ, ಇಷ್ಟಾರ್ಥ ಸಿದ್ಧಿಸುವಂತೆ ಪ್ರಾರ್ಥನೆ ಮಾಡ್ತಾರೆ. ಈ ಬಾರಿ ಮಾರ್ಚ್ 8ರಂದು ಮಹಾಶಿವರಾತ್ರಿ ಆಚರಣೆ ಮಾಡಲಾಗುತ್ತಿದೆ. ಶಿವರಾತ್ರಿಯ ಶುಭ ಸಂದರ್ಭದಲ್ಲಿ ಈಶ್ವರನಿಗೆ ಪ್ರಿಯವಾದ ವಸ್ತು ಹಾಗೂ ಆಹಾರವನ್ನು ಅರ್ಪಿಸುವ ಪದ್ಧತಿ ಇದೆ. ಬಿಲ್ಪಪತ್ರೆ, ಅಭಿಷೇಕದ ಜೊತೆ ದತ್ತೂರಾ ಅರ್ಪಿಸುವಂತೆ ಸಲಹೆ ನೀಡಲಾಗುತ್ತದೆ. ದತ್ತೂರ ತನ್ನದೇ ಆದ ಮಹತ್ವವನ್ನು ಹೊಂದಿದೆ.
ನೀವು ಶಿವರಾತ್ರಿ ದಿನ ದತ್ತೂರ ಅರ್ಪಿಸೋದ್ರಿಂದ ರಾಹು ದೋಷ ನಿವಾರಣೆಯಾಗುತ್ತದೆ. ಕಾಲಸರ್ಪದೋಷ ಹಾಗೂ ಪಿತೃ ದೋಷದಿಂದ ಬಳಲುತ್ತಿರುವವರು ಈ ದಿನ ಅಗತ್ಯವಾಗಿ ಈಶ್ವರನಿಗೆ ದತ್ತೂರವನ್ನು ಅರ್ಪಿಸಿ.
ಸಮುದ್ರ ಮಂಥನದ ವೇಳೆ ವಿಷ ಸೇವನೆ ಮಾಡಿದ ಶಿವನನ್ನು ಎಚ್ಚರಗೊಳಿಸಲು ದೇವಾನುದೇವತೆಗಳು ಕೆಲ ಗಿಡಗಳು, ಹೂಗಳಿಂದ ಅಭಿಷೇಕ ಮಾಡಿದರಂತೆ. ಅದ್ರಲ್ಲಿ ದತ್ತೂರ ಕೂಡಿದೆ ಎಂದು ಗ್ರಂಥಗಳಲ್ಲಿ ಹೇಳಲಾಗಿದೆ.
ಈ ದತ್ತೂರವನ್ನು ಮನೆಯಲ್ಲಿ ಬೆಳೆಸುವುದ್ರಿಂದ ಅನೇಕ ಪ್ರಯೋಜನವಿದೆ. ಶಿವನ ಕೃಪೆಗೆ ನೀವು ಪಾತ್ರರಾಗುವುದಲ್ಲದೆ, ನಿಮ್ಮೆಲ್ಲ ಕಷ್ಟಗಳಿಗೆ ಪರಿಹಾರ ಸಿಗುತ್ತದೆ. ಇದಲ್ಲದೆ ಹಣಕಾಸಿನ ಸಮಸ್ಯೆಗೆ ಬೇಗ ಪರಿಹಾರ ಸಿಗುತ್ತದೆ.
ಆಯುರ್ವೇದದಲ್ಲಿ ಧಾತುರವನ್ನು ಔಷಧವಾಗಿಯೂ ಬಳಸುತ್ತಾರೆ. ಇದು ದೀರ್ಘಕಾಲದ ಜ್ವರ, ಕೀಲು ನೋವು ಮತ್ತು ವಿಷದ ಪರಿಣಾಮಗಳನ್ನು ತೆಗೆದುಹಾಕಲು ಪರಿಣಾಮಕಾರಿ ಎಂದು ನಂಬಲಾಗಿದೆ.