ಪ್ರಯಾಣಿಕನೋರ್ವ ‘ಏರ್ ಲೈನ್ಸ್’ ವಿಮಾನದ ಸಿಬ್ಬಂದಿ ಮುಖಕ್ಕೆ ಪಂಚ್ ಕೊಟ್ಟು ಹಲ್ಲೆ ನಡೆಸಿದ ಘಟನೆಯ ವಿಡಿಯೋ ವೈರಲ್ ಆಗಿದೆ.
ವಿಮಾನದ ಶೌಚಾಲಯವನ್ನು ಧ್ವಂಸಗೊಳಿಸಿದ ನಂತರ ಶರ್ಟ್ ಲೆಸ್ ಬ್ರಿಟಿಶ್ ಪ್ರಯಾಣಿಕನೊಬ್ಬ ಏರ್ ಸ್ಟೀವರ್ಡ್ ನ ಮುಖಕ್ಕೆ ಹೊಡೆದ ಆಘಾತಕಾರಿ ಕ್ಷಣ ಇದು.
ಬ್ಯಾಂಕಾಕ್ ನಿಂದ ಹೀಥ್ರೂಗೆ ತೆರಳುತ್ತಿದ್ದ ಥಾಯ್ ಏರ್ ವೇಸ್ ವಿಮಾನದಲ್ಲಿ ಕ್ಯಾಬಿನ್ ಸಿಬ್ಬಂದಿಯ ಮೇಲೆ 35 ವರ್ಷದ ಪ್ರಯಾಣಿಕ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ.ವಿಮಾನ ಹಾರುವಾಗ ಟಾಯ್ಲೆಟ್ ಒಳಗಡೆ ಹೋದ ಪ್ರಯಾಣಿಕ ಕೂಗಾಡಿ ಬಾಗಿಲು ಒಡೆದಿದ್ದಾನೆ, ನಂತರ ಟಾಯ್ಲೆಟ್ ನಿಂದ ಹೊರಗೆ ಬಂದ ಪ್ರಯಾಣಿಕನ್ನು ತಡೆಯಲು ಹೋದ ಸಿಬ್ಬಂದಿ ಮೂಗಿಗೆ ಪಂಚ್ ಕೊಟ್ಟು ಹಲ್ಲೆ ನಡೆಸಿದ್ದಾನೆ. ಈತ ಕಿರುಚಾಟ ಮಾಡಲು , ಗಲಾಟೆ ಮಾಡಲು ಕಾರಣ ತಿಳಿದು ಬಂದಿಲ್ಲ.ಸದ್ಯ ಈತ ಪೊಲೀಸರ ಅತಿಥಿಯಾಗಿದ್ದಾನೆ.