ನವದೆಹಲಿ : ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗುವುದಿಲ್ಲ, ಅದರ ಸಮನ್ಸ್ ಕಾನೂನುಬಾಹಿರವಾಗಿದೆ ಎಂದು ಎಎಪಿ ಹೇಳಿದೆ.
ಕೇಜ್ರಿವಾಲ್ ಅವರಿಗೆ ಪದೇ ಪದೇ ಸಮನ್ಸ್ ಕಳುಹಿಸುವ ಬದಲು ಇಡಿ ನ್ಯಾಯಾಲಯದ ನಿರ್ಧಾರಕ್ಕಾಗಿ ಕಾಯಬೇಕು ಎಂದು ಪಕ್ಷ ಹೇಳಿದೆ.
ಅರವಿಂದ್ ಕೇಜ್ರಿವಾಲ್ ಗೆ 6ನೇ ಸಮನ್ಸ್ ಜಾರಿ
ಸಿಎಂ ಕೇಜ್ರಿವಾಲ್ ಅವರಿಗೆ ಮೊದಲ ಸಮನ್ಸ್ ಅನ್ನು ನವೆಂಬರ್ 2, 2023 ರಂದು ಕಳುಹಿಸಲಾಗಿದ್ದು, ಎರಡನೇ ಸಮನ್ಸ್ ಅನ್ನು ಡಿಸೆಂಬರ್ 21, 2023 ಕ್ಕೆ ಕಳುಹಿಸಲಾಗಿದೆ. ಮೂರನೇ ಸಮನ್ಸ್ ಅನ್ನು ಈ ವರ್ಷದ ಜನವರಿ ೩ ಕ್ಕೆ ಕಳುಹಿಸಲಾಗಿದೆ. ನಾಲ್ಕನೇ ಸಮನ್ಸ್ ಅನ್ನು ಜನವರಿ 17 ಕ್ಕೆ ಮತ್ತು ಐದನೇ ಸಮನ್ಸ್ ಅನ್ನು ಫೆಬ್ರವರಿ 2 ಕ್ಕೆ ಕಳುಹಿಸಲಾಗಿದೆ. ಇದು ಆರನೇ ಸಮನ್ಸ್ ಆಗಿದೆ.
ಇಡಿ ಸಮನ್ಸ್ ಗೆ ಸಂಬಂಧಿಸಿದಂತೆ ಮೋದಿ ಸರ್ಕಾರವು ತನಗೆ ಕಿರುಕುಳ ನೀಡುತ್ತಿದೆ ಎಂದು ಕೇಜ್ರಿವಾಲ್ ಪದೇ ಪದೇ ಆರೋಪಿಸುತ್ತಿದ್ದಾರೆ. ಕೇಜ್ರಿವಾಲ್ ಮತ್ತು ಅವರ ಆಮ್ ಆದ್ಮಿ ಪಕ್ಷವು ಇಡಿ ಸಮನ್ಸ್ ಅನ್ನು ಕಾನೂನುಬಾಹಿರ ಎಂದು ನಿರಂತರವಾಗಿ ಕರೆಯುತ್ತಿದೆ.