ನವದೆಹಲಿ: ರಷ್ಯಾದೊಂದಿಗೆ ನಡೆಯುತ್ತಿರುವ ವ್ಯಾಪಾರದ ಮಧ್ಯೆ ಅಮೆರಿಕದೊಂದಿಗೆ ಭಾರತದ ಸಂಬಂಧದ ಕುರಿತು ವಿದೇಶಾಂಗ ಸಚಿವ ಎಸ್. ಜೈಶಂಕರ್ ಮಹತ್ವದ ಹೇಳಿಕೆ ನೀಡಿದ್ದು, ಇದು ನಮಗೆ ಸಮಸ್ಯೆಯಲ್ಲ ಎಂದು ಹೇಳಿದ್ದಾರೆ.
ಮ್ಯೂನಿಚ್ ನಲ್ಲಿ ನಡೆದ ಭದ್ರತಾ ಸಮ್ಮೇಳನದಲ್ಲಿ ಜೈಶಂಕರ್ ಈ ಹೇಳಿಕೆ ನೀಡಿದಾಗ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಮತ್ತು ಜರ್ಮನಿಯ ವಿದೇಶಾಂಗ ಸಚಿವೆ ಅನ್ನಾಲೆನಾ ಬೇರ್ಬಾಕ್ ಕೂಡ ವೇದಿಕೆಯಲ್ಲಿದ್ದರು.
ರಷ್ಯಾದೊಂದಿಗೆ ವ್ಯಾಪಾರವನ್ನು ಮುಂದುವರಿಸುವಾಗ ಭಾರತವು ಯುಎಸ್ ನೊಂದಿಗೆ ಬೆಳೆಯುತ್ತಿರುವ ದ್ವಿಪಕ್ಷೀಯ ಸಂಬಂಧವನ್ನು ಹೇಗೆ ಸಮತೋಲನಗೊಳಿಸುತ್ತಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಜೈಶಂಕರ್ ಅವರು, ಇದು ಸಮಸ್ಯೆಯೇ, ಏಕೆ ಸಮಸ್ಯೆಯಾಗಬೇಕು? ನಾನು ತುಂಬಾ ಬುದ್ಧಿವಂತನಾಗಿದ್ದೇನೆ, ನನಗೆ ಅನೇಕ ಆಯ್ಕೆಗಳಿವೆ, ನೀವು ನನ್ನನ್ನು ಅಭಿನಂದಿಸಬೇಕು ಎಂದು ಹೇಳಿದ್ದಾರೆ. ಈ ಮೂಲಕ ರಷ್ಯಾದ ಅಗ್ಗದ ತೈಲವನ್ನು ಖರೀದಿಸುವ ಭಾರತದ ನಿಲುವು ಮತ್ತು ಬದ್ಧತೆಯನ್ನು ವಿದೇಶಾಂಗ ಸಚಿವ ಎಸ್ ಜೈಶಂಕರ್ ಎತ್ತಿ ತೋರಿಸಿದ್ದಾರೆ.