ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತನ್ನ ಸುಧಾರಿತ ಹವಾಮಾನ ಉಪಗ್ರಹ ಇನ್ಸಾಟ್ -3 ಡಿಎಸ್ ಅನ್ನು ಶನಿವಾರ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಿತು.
ಭೂಮಿ ಮತ್ತು ಸಮುದ್ರದ ಮೇಲಿನ ಹವಾಮಾನ ಮಾದರಿಗಳ ಮೇಲ್ವಿಚಾರಣೆ ಮಾಡುತ್ತದೆ, ವಿಪತ್ತು ಸನ್ನದ್ಧತೆ ಮತ್ತು ಪ್ರತಿಕ್ರಿಯೆಗೆ ಸಹಾಯ ಮಾಡಲಿದೆ ಎಂದು ಇಸ್ರೋ ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ.ಇನ್ಸಾಟ್-೩ಡಿಎಸ್” ಉಪ್ರಗ್ರಹದ ಪ್ರಾಥಮಿಕ ಗುರಿ ಹವಾಮಾನ ವೀಕ್ಷಣೆ ವರ್ಧಿಸುವುದು ಮತ್ತು ಹವಾಮಾನ ಮುನ್ಸೂಚನೆ ಮತ್ತು ವಿಪತ್ತು ಎಚ್ಚರಿಕೆಗಾಗಿ ಭೂಮಿ ಮತ್ತು ಸಾಗರ ಮೇಲ್ಮೈಗಳನ್ನು ಮೇಲ್ವಿಚಾರಣೆ ಮಾಡುವುದಾಗಿದೆ.
“ಇನ್ಸಾಟ್-೩ಡಿಎಸ್” ಉಪಗ್ರಹದ ಮೂಲಕ ಹೆಚ್ಚು ನಿಖರವಾದ ಹವಾಮಾನ ದತ್ತಾಂಶ ಒದಗಿಸಲು ವಿನ್ಯಾಸಗೊಳಿಸಲಾಗಿದೆ, ಭಾರತದ ಹವಾಮಾನ ಏಜೆನ್ಸಿಗಳು ಉತ್ತಮ ಮುನ್ಸೂಚನೆ ನೀಡಲು ಸಹಾಯ ಮಾಡುತ್ತದೆ.