ಟೆಹ್ರಾನ್ : ಆಗ್ನೇಯ ಇರಾನ್ ನ ದೂರದ ಗ್ರಾಮೀಣ ಪ್ರದೇಶದಲ್ಲಿ 30 ವರ್ಷದ ವ್ಯಕ್ತಿಯೊಬ್ಬ ತನ್ನ 12 ಸಂಬಂಧಿಕರನ್ನು ಶನಿವಾರ ಗುಂಡಿಕ್ಕಿ ಕೊಂದಿದ್ದಾನೆ.
ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಬಂದೂಕುಧಾರಿ ತನ್ನ ತಂದೆ, ಸಹೋದರ ಮತ್ತು ಇತರ ಸಂಬಂಧಿಕರ ಮೇಲೆ ಮುಂಜಾನೆ ಗುಂಡು ಹಾರಿಸಿದ್ದಾನೆ ಎಂದು ಕೆರ್ಮನ್ ಪ್ರಾಂತ್ಯದ ನ್ಯಾಯಾಂಗ ವಿಭಾಗದ ಮುಖ್ಯಸ್ಥ ಇಬ್ರಾಹಿಂ ಹಮೀದಿ ಅರೆ ತಿಳಿಸಿದ್ದಾರೆ.
2022 ರಲ್ಲಿ, ಸರ್ಕಾರಿ ಸ್ವಾಮ್ಯದ ಹಣಕಾಸು ಸಂಸ್ಥೆಯಿಂದ ವಜಾಗೊಂಡ ಉದ್ಯೋಗಿಯೊಬ್ಬ ತಾನು ಹಿಂದೆ ಕೆಲಸ ಮಾಡುತ್ತಿದ್ದ ಸ್ಥಳದಲ್ಲಿ ಗುಂಡು ಹಾರಿಸಿ, ಮೂರು ಜನರನ್ನು ಕೊಂದು, ಇತರ ಐದು ಜನರನ್ನು ಗಾಯಗೊಳಿಸಿದ್ದನು. 2016ರಲ್ಲಿ 26 ವರ್ಷದ ವ್ಯಕ್ತಿಯೊಬ್ಬ ಇರಾನ್ ದಕ್ಷಿಣ ಭಾಗದ ಗ್ರಾಮೀಣ ಪ್ರದೇಶದಲ್ಲಿ 10 ಸಂಬಂಧಿಕರನ್ನು ಗುಂಡಿಕ್ಕಿ ಕೊಂದಿದ್ದನು. ಇದೀಗ 30 ವರ್ಷದ ವ್ಯಕ್ತಿಯೊಬ್ಬ ತನ್ನ 12 ಸಂಬಂಧಿಕರನ್ನು ಶನಿವಾರ ಗುಂಡಿಕ್ಕಿ ಕೊಂದಿದ್ದಾನೆ.