ರಾಜ್ ಗುರು ನಿರ್ದೇಶನದ ಗೌರಿಶಂಕರ್ ಅಭಿನಯದ ಬಹುನಿರೀಕ್ಷಿತ ‘ಕೆರೆ ಬೇಟೆ’ ಚಿತ್ರದ ಟ್ರೈಲರ್ ಇದೆ ಫೆಬ್ರವರಿ 20ರಂದು a2 ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ. ಟ್ರೈಲರ್ ಲಾಂಚ್ ಕಾರ್ಯಕ್ರಮಕ್ಕೆ ಕಿಚ್ಚ ಸುದೀಪ್ ಅತಿಥಿಯಾಗಿ ಆಗಮಿಸಲಿದ್ದು, ಅವರ ಕೈಯಲ್ಲೇ ಟ್ರೈಲರ್ ಬಿಡುಗಡೆ ಮಾಡಿಸುವುದಾಗಿ ಚಿತ್ರತಂಡ ಇಂದು ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದೆ.
ಜನಮನ ಸಿನಿಮಾಸ್ ಬ್ಯಾನರ್ ನಲ್ಲಿ ಜೈ ಶಂಕರ್ ಪಾಟೀಲ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಗೌರಿಶಂಕರ್ ಸೇರಿದಂತೆ ಬಿಂದು ಶಿವರಾಂ, ಗೋಪಾಲ್ ದೇಶಪಾಂಡೆ, ಸಂಪತ್ ಮೈತ್ರಿಯ, ಹರಿಣಿ ಶ್ರೀಕಾಂತ್, ಚಿಲ್ಲರ್ ಮಂಜು, ರಾಕೇಶ್ ಪೂಜಾರಿ, ವರ್ಧನ್ ತೀರ್ಥಹಳ್ಳಿ, ರಾಮದಾಸ್, ಬಣ್ಣ ಹಚ್ಚಿದ್ದಾರೆ. ಜ್ಞಾನೇಶ್ ಬಿ ಮಾತಾಡ್ ಸಂಕಲನ, ಕೀರ್ತನ್ ಪೂಜಾರಿ ಛಾಯಾಗ್ರಹಣ, ಟೈಗರ್ ಶಿವು ಹಾಗೂ ಡ್ಯಾನಿ ಸಾಹಸ ನಿರ್ದೇಶನ, ಗಗನ್ ಸಂಗೀತ ಸಂಯೋಜನೆ ನೀಡಿದ್ದಾರೆ.