alex Certify ರೇವ್‌ ಪಾರ್ಟಿಗಳಲ್ಲಿ ಬಳಸ್ತಿರೋ ಕ್ರೈಟ್ ಹಾವು ಎಷ್ಟು ಅಪಾಯಕಾರಿ ಗೊತ್ತಾ ? ಇಲ್ಲಿದೆ ಶಾಕಿಂಗ್‌ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೇವ್‌ ಪಾರ್ಟಿಗಳಲ್ಲಿ ಬಳಸ್ತಿರೋ ಕ್ರೈಟ್ ಹಾವು ಎಷ್ಟು ಅಪಾಯಕಾರಿ ಗೊತ್ತಾ ? ಇಲ್ಲಿದೆ ಶಾಕಿಂಗ್‌ ಮಾಹಿತಿ

ಇತ್ತೀಚಿನ ದಿನಗಳಲ್ಲಿ ಕೆಲ ರೇವ್‌ ಪಾರ್ಟಿಗಳಲ್ಲಿ ಮತ್ತೇರಿಸಿಕೊಳ್ಳಲು ಹಾವಿನ ವಿಷವನ್ನೂ ಬಳಕೆ ಮಾಡಲಾಗ್ತಿದೆ. ಯೂಟ್ಯೂಬರ್ ಎಲ್ವಿಶ್ ಯಾದವ್ ಎಂಬಾತನ ರೇವ್ ಪಾರ್ಟಿಯಲ್ಲೂ ಕೋಬ್ರಾ ಕ್ರೈಟ್ ಹಾವಿನ ವಿಷವನ್ನು ಬಳಕೆ ಮಾಡಿರೋದು ವರದಿಯಲ್ಲಿ ದೃಢಪಟ್ಟಿದೆ. ಕ್ರೈಟ್ ಹಾವು ಎಷ್ಟು ಅಪಾಯಕಾರಿ, ಅದನ್ಯಾಕೆ ಪಾರ್ಟಿಗಳಲ್ಲಿ ಬಳಸಲಾಗುತ್ತದೆ ಎಂಬುದನ್ನು ನೋಡೋಣ.

ಕ್ರೈಟ್‌ ಜಾತಿಯ ಹಾವುಗಳಲ್ಲಿ ಎರಡು ವಿಧಗಳಿವೆ. ಬ್ಲಾಕ್‌ ಕ್ರೈಟ್ ಮತ್ತು ಕಾಮನ್‌ ಕ್ರೈಟ್. ಎರಡೂ ವಿಧದ ಹಾವುಗಳು ತುಂಬಾ ವಿಷಕಾರಿಯಾಗಿದೆ. ಜೂನ್‌ನಿಂದ ಅಕ್ಟೋಬರ್‌ವರೆಗೆ ಕ್ರೈಟ್ ಹೆಚ್ಚು ಸಕ್ರಿಯವಾಗಿರುತ್ತದೆ. ಇವು ಚಳಿಗಾಲದಲ್ಲಿ ತಮ್ಮ ರಂಧ್ರಗಳಲ್ಲಿ ಅಡಗಿಕೊಳ್ಳುತ್ತವೆ.

ಇವುಗಳ ಹಾವಳಿಯನ್ನು ತಪ್ಪಿಸಲು ಬಯಸಿದರೆ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಿ. ನೆಲದ ಮೇಲೆ ಮಲಗಬೇಡಿ. ಕಡಿಮೆ ಎತ್ತರದಲ್ಲಿ ಮತ್ತು ತೆರೆದ ಸ್ಥಳದಲ್ಲಿ ಮಲಗುವುದನ್ನು ತಪ್ಪಿಸಿ.

ಕ್ರೈಟ್ ಹಾವನ್ನು ಮೂಕ ಕೊಲೆಗಾರ ಎಂದೂ ಕರೆಯಲಾಗುತ್ತದೆ. ರಾತ್ರಿ ಬಿಲದಿಂದ ಹೊರಬಂದು ಮಲಗಿರುವ ಮನುಷ್ಯರನ್ನು ಕಚ್ಚುವ ಅಭ್ಯಾಸ ಈ ಹಾವಿಗಿದೆ. ಮಲಗಿರುವಾಗ ಹಾವು ಕಚ್ಚಿದರೆ ಎಚ್ಚರವೇ ಆಗುವುದಿಲ್ಲ, ದೇಹದಲ್ಲಿ ವಿಷವು ಹರಡುತ್ತದೆ ಮತ್ತು ಸಾವು ಸಂಭವಿಸುತ್ತದೆ.

ಕ್ರೈಟ್ ಹಾವಿನ ಉದ್ದ ಸುಮಾರು 6.5 ಅಡಿ ಎಂಬುದು ಗಮನಾರ್ಹ. ಅವುಗಳ ವಯಸ್ಸು 10 ರಿಂದ 17 ವರ್ಷಗಳು. ಸಾಮಾನ್ಯ ಕ್ರೈಟ್ ಹಾವು ತನ್ನ ದೇಹದ ಮೇಲೆ ಕಂದು ಮತ್ತು ಬಿಳಿ ಪಟ್ಟೆಗಳನ್ನು ಹೊಂದಿರುತ್ತದೆ. ಕಪ್ಪು ಕ್ರೈಟ್ ಮೇಲೆ ಕಪ್ಪನೆಯ ಪಟ್ಟಿಗಳಿರುತ್ತವೆ. ಈ ಹಾವಿನ ವಿಷದಲ್ಲಿರುವ ನ್ಯೂರೋಟಾಕ್ಸಿನ್‌ಗಳಿಂದಾಗಿ ದೇಹವು ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತದೆ.

ಈ ಹಾವಿನ ವಿಷವನ್ನು ಮೂರು ರೀತಿಯಲ್ಲಿ ಸೇವಿಸಲಾಗುತ್ತದೆ. ಹಾವಿನ ವಿಷವನ್ನು ಆಲ್ಕೋಹಾಲ್ ಅಥವಾ ನೋವು ನಿವಾರಕಗಳೊಂದಿಗೆ ಬೆರೆಸಿ ತೆಗೆದುಕೊಳ್ಳಲಾಗುತ್ತದೆ. ಇದಲ್ಲದೆ  ತರಬೇತಿ ಪಡೆದ ಹಾವಿನ ವಿಷವನ್ನು ನಾಲಿಗೆ ಕತ್ತರಿಸಿ ರೇವ್ ಪಾರ್ಟಿಗಳಲ್ಲಿ ಬಳಸಲಾಗುತ್ತದೆ. ನುರಿತ ಹಾವಾಡಿಗರ ಮೂಲಕ ಈ ಹಾವಿನಿಂದ ಕಚ್ಚಿಸಿಕೊಂಡು ಮತ್ತು ಅನುಭವಿಸುವವರೂ ಇದ್ದಾರೆ.

ಹಾವಿನ ವಿಷವನ್ನು ಸೇವಿಸಿದ ನಂತರ ವ್ಯಕ್ತಿಗೆ ಸ್ವಲ್ಪ ಸಮಯದವರೆಗೆ ಪ್ರಜ್ಞೆ ಇರುವುದಿಲ್ಲ. ಇದರ ಪರಿಣಾಮ 4 ವಾರಗಳವರೆಗೆ ಇರುತ್ತದೆ. ಆದರೆ ಇದು ತುಂಬಾ ಅಪಾಯಕಾರಿ ಮತ್ತು ಸಾವಿಗೆ ಕಾರಣವಾಗಬಹುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...