ಬೆಂಗಳೂರು: ಪ್ರೇಮಿಗಳ ದಿನಾಚರಣೆಯ ದಿನದಂದು ಪ್ಲಾಸ್ಟಿಕ್ ನಲ್ಲಿ ಗುಲಾಬಿ ಹೂ ಸುತ್ತಿ ಮಾರಾಟ ಮಾಡಿದ್ದ ವ್ಯಾಪಾರಿಗಳಿಗೆ ಬಿಬಿಎಂಪಿ ದಂಡ ವಿಧಿಸುವ ಕ್ರಮಕ್ಕೆ ಮುಂದಾಗಿದೆ.
ಪ್ಲಾಸ್ಟಿಕ್ ನಿಷೇಧ ಇರುವುದರಿಂದ ಇದೀಗ ಗುಲಾಬಿ ಹೂ ಮಾರಾಟಗಾರರಿಗೆ ಪಾಲಿಕೆ ಶಾಕ್ ನೀಡಿದೆ. ಗುಲಾಬಿ ಹೂವಿನ ಜೊತೆಗೆ ಪ್ಲಾಸ್ಟಿಕ್ ಬಳಕೆ ಮಾಡಿದ ಹಿನ್ನೆಲೆಯಲ್ಲಿ ಬಿಬಿಎಂಪಿ ಘನತ್ಯಾಜ್ಯ ವಿಭಾಗದಿಂದ 959 ಹೂವಿನ ವ್ಯಾಪಾರಿಗಳಿಂದ ಬರೊಬ್ಬರಿ 2.46 ಲಕ್ಷ ರೂಪಾಯಿ ದಂಡ ವಸೂಲಿ ಮಾಡಿದೆ.
ವ್ಯಾಲೆಂಟೈನ್ ಡೇ ದಿನದಂದು ಭಾರಿ ಪ್ರಮಾಣದಲ್ಲಿ ಗುಲಾಬಿ ಹೂ ಖರೀದಿಯಾಗಿತ್ತು. ಆದರೆ ಹೂವಿನ ಸುತ್ತ ಪ್ಲಾಸ್ಟಿಕ್ ನಲ್ಲಿ ಕವರ್ ಮಾಡಿ ವ್ಯಾಪಾರಸ್ಥರು ಮಾರಿದ್ದರು. ಇದರಿಂದ ಪ್ಲಾಸ್ಟಿಕ್ ಬಳಕೆ ಮಾಡಿದ್ದಕ್ಕೆ ಇದೀಗ ಬಿಬಿಎಂಪಿ ಭಾರೀ ದಂಡ ವಿಧಿಸಿದೆ.