ಬಳ್ಳಾರಿ : ನಗರದ ರೇಡಿಯೋ ಪಾರ್ಕ್ ಪ್ರದೇಶದಲ್ಲಿರುವ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಫೆ.19 ರಂದು ಬೆಳಿಗ್ಗೆ 9 ಗಂಟೆಗೆ ಸ್ಥಳೀಯ ಉದ್ದಿಮೆದಾರರಿಂದ ಅಪ್ರೆಂಟೀಸ್ ತರಬೇತಿಗಾಗಿ ಸಂದರ್ಶನ ಏರ್ಪಡಿಸಲಾಗಿದೆ ಎಂದು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರಾದ ಕೆ.ಹೆಚ್.ಎಂ.ಪಂಡಿತಾರಾಧ್ಯ ಅವರು ತಿಳಿಸಿದ್ದಾರೆ.
ಸಂದರ್ಶನದಲ್ಲಿ ಫಿಟ್ಟರ್, ಟರ್ನರ್, ಎಲೆಕ್ಟ್ರಿಷಿಯನ್, ವೆಲ್ಡರ್, ಇ.ಎಂ, ಎಂ.ಎಂ.ವಿ, ಮೆಕ್ಯಾನಿಕ್ ಡೀಸಲ್, ಕೊಪಾ (ಅಔPಂ), ಟಾಟಾ (ಖಿಂಖಿಂ) ವಿವಿಧ ವೃತ್ತಿಗಳ ಐ.ಟಿ.ಐ ಪಾಸಾದ ಅಭ್ಯರ್ಥಿಗಳು ಹಾಗೂ ಅಂತಿಮ ವರ್ಷದ ತರಬೇತಿದಾರರು ಭಾಗವಹಿಸಬಹುದು.
*ದಾಖಲೆಗಳು
ಸಂದರ್ಶನದಲ್ಲಿ ಭಾಗವಹಿಸುವವರು ಎಸ್.ಎಸ್.ಎಲ್.ಸಿ ಅಂಕಪಟ್ಟಿ, ಐಟಿಐ ಅಂಕಪಟ್ಟಿ, ಎರಡು ಭಾವಚಿತ್ರಗಳು, ಆಧಾರ್ ಕಾರ್ಡ್ನ ಪ್ರತಿ ಹಾಗೂ ಸ್ವ-ವಿವರವುಳ್ಳ ಬಯೋಡೇಟಾ ತರಬೇಕು. 18 ವರ್ಷ ಮೇಲ್ಪಟ್ಟವರು ಅರ್ಹರಾಗಿರುತ್ತಾರೆ.
ಸಂದರ್ಶನವು ಫೆ.19 ರಂದು ಬೆಳಿಗ್ಗೆ 9 ಗಂಟೆಯಿಂದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ನಡೆಯಲಿದೆ.ಹೆಚ್ಚಿನ ಮಾಹಿತಿಗಾಗಿ ಮೊ.9741183501 ಗೆ ಸಂಪರ್ಕಿಸಬಹುದು. ಅರ್ಹರು ಕ್ಯಾಂಪಸ್ ಸಂದರ್ಶನಕ್ಕೆ ಹಾಜರಾಗಿ ಇದರ ಲಾಭಪಡೆದುಕೊಳ್ಳಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.