ಕೊಯಮತ್ತೂರು : ಬೈಕ್ ಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ 32 ವರ್ಷದ ವ್ಯಕ್ತಿ ಮತ್ತು ಆತನ ಮೂರು ವರ್ಷದ ಮಗ ಮೃತಪಟ್ಟಿರುವ ಘಟನೆ ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯಲ್ಲಿ ನಡೆದಿದೆ.
ಕಳೆದ ಶುಕ್ರವಾರ (ಫೆಬ್ರವರಿ 9) ನಗರದ ಮೆಟ್ಟುಪಾಳಯಂ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಅಶೋಕ್ ಕುಮಾರ್ ತನ್ನ ಪತ್ನಿ ಸುಶೀಲಾ (30) ಮತ್ತು ಅವರ ಮಗ ಶರವಂತ್ ಅವರೊಂದಿಗೆ ಪೆರಿಯನಾಯಕನ್ ಪಾಳ್ಯಂ ಪ್ರದೇಶದ ಕಡೆಗೆ ಪ್ರಯಾಣಿಸುತ್ತಿದ್ದರು.ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ವೇಗವಾಗಿ ಚಲಿಸುತ್ತಿದ್ದ ಖಾಸಗಿ ಬಸ್ ಕುಮಾರ್ ಅವರ ದ್ವಿಚಕ್ರ ವಾಹನಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಪರಿಣಾಮ ತಂದೆ ಮಗ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತಾಯಿ ಗಂಭೀರವಾಗಿ ಗಾಯಗೊಂಡಿದ್ದಾರೆ.
Who is responsible for this accident (murder) caused by high-speed, loud horn, and reckless driving?Coimbatore to Mettupalayam high way. Who will put an end to this deadly behavior? pic.twitter.com/R6kf8375hP
— vamadevan (@vamadevank) February 14, 2024

