ಕನ್ನಡ ಚಿತ್ರರಂಗ ಬೆಳವಣಿಗೆ ನನ್ನೊಬ್ಬನಿಂದಾಗುವ ಕೆಲಸವಲ್ಲ, ಎಲ್ಲರೂ ಕೈಜೋಡಿಸಬೇಕು: ರಾಕಿಂಗ್ ಸ್ಟಾರ್ ಯಶ್

ಬೆಂಗಳೂರು: ಕನ್ನಡ ಚಿತ್ರರಂಗದ ಬೆಳವಣಿಗೆಗೆ ನಾನು ರೆಡಿ ಇದ್ದೇನೆ. ಆದರೆ, ಅದು ನನ್ನೊಬ್ಬನಿಂದಾಗುವ ಕೆಲಸವಲ್ಲ, ನನ್ನ ವೇಗಕ್ಕೆ ಸರಿಯಾಗಿ ಉಳಿದವರು ಬಂದರೆ ನಾವೆಲ್ಲರೂ ಜೊತೆಯಾಗಿ ಚಿತ್ರರಂಗವನ್ನು ಮುನ್ನಡೆಸಬಹುದು ಎಂದು ನಟ ರಾಕಿಂಗ್ ಸ್ಟಾರ್ ಯಶ್ ಹೇಳಿದ್ದಾರೆ.

ಕಿಟ್ಟಿಸ್ ಮಸಲ್ ಪ್ಲಾನೆಟ್ ಜಿಮ್ ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲರನ್ನೂ ಹೆಗಲ ಮೇಲೆ ಹೊತ್ತುಕೊಂಡು ಹೋಗಬೇಕು ಎಂದರೆ ಕಷ್ಟ. ರಾಷ್ಟ್ರಮಟ್ಟದಲ್ಲಿ ಕನ್ನಡ ಚಿತ್ರರಂಗವನ್ನು ಈ ಹಿಂದೆ ಹೇಗೆ ನೋಡುತ್ತಿದ್ದರು? ಈಗ ಯಾವ ರೀತಿ ನೋಡುತ್ತಿದ್ದಾರೆ ಎನ್ನುವುದನ್ನು ಕೂಡ ಗಮನಿಸಬೇಕಿದೆ. ಚಿತ್ರರಂಗದ ಬೆಳವಣಿಗೆಗೆ ಎಲ್ಲರೂ ಕೈಜೋಡಿಸಬೇಕು ಎಂದು ತಿಳಿಸಿದ್ದಾರೆ.

ನನಗೆ ಬೇರೆ ಬೇರೆ ಕಡೆಯಿಂದ ಸಿನಿಮಾಗಳಿಗೆ ಆಫರ್ ಬರುತ್ತಿದೆ. ಹಾಗೆಂದು ನಾನು ಸಿನಿಮಾ ಒಪ್ಪಿಕೊಂಡಿದ್ದೇನೆ ಎಂದು ಅರ್ಥವಲ್ಲ. ನಾನು ಯಾವುದಾದರೂ ಸಿನಿಮಾ ಒಪ್ಪಿಕೊಂಡರೆ ನಾನೇ ತಿಳಿಸುತ್ತೇನೆ ಎಂದು ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read