ಮಂಡ್ಯ: ಮಹಿಳೆಯನ್ನು ಪೊಲೀಸ್ ಠಾಣೆಗೆ ಕರೆಸಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಎಸ್ ಐ ಓರ್ವರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.
ಮಂಡ್ಯದ ಪೂರ್ವ ಠಾಣೆಯ ಪಿಎಸ್ ಐ ಅಯ್ಯನಗೌಡ ಅಮಾನತುಗೊಂಡವರು. ನಿನ್ನೆ ಸಂಜೆ ಮಹಿಳೆಯನ್ನು ಠಾಣೆಗೆ ಕರೆಸಿ ವಿಚಾರಣೆ ನೆಪದಲ್ಲಿ ಹಲ್ಲೆ ಮಾಡಿದ್ದ ಆರೋಪ ಕೇಳಿಬಂದಿದೆ.
ಮಂಡ್ಯದ ಅಶೋಕ ನಗರದ ಮಹಿಳೆ ರೂಪಾದೇವಿ ಎಂಬುವವರ ಮೇಲೆ ಹಲ್ಲೆ ಮಾಡಿದ್ದರು. ಹಸುಗಳನ್ನು ರಸ್ತೆಯಲ್ಲಿ ಕಟ್ಟಿಹಾಕುತ್ತಾರೆ ಎಂದು ಠಾಣೆಗೆ ಮಹಿಳೆಯನ್ನು ಕರೆದು ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿತ್ತು. ಈ ಬಗ್ಗೆ ಪಿಎಸ್ ಐ ವಿರುದ್ಧ ರೂಪಾದೇವಿ ತಾಯಿ ಗೌರಮ್ಮ ದೂರು ನೀಡಿದ್ದರು. ದೂರು ಹಿನ್ನೆಲೆಯಲ್ಲಿ ಪಿಎಸ್ ಐ ಅಯ್ಯನಗೌಡ ವಿರುದ್ಧ ಕೇಸ್ ದಾಖಲಾಗಿದ್ದು, ಈ ಹಿನ್ನೆಲೆಯಲ್ಲಿ ಮಂಡ್ಯ ಎಸ್ ಪಿ ಯತೀಶ್, ಪಿಎಸ್ ಐ ಅಯ್ಯನಗೌಡನನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.