ಬೆಂಗಳೂರು: ವಿಧಾನ ಪರಿಷತ್ ಬೆಂಗಳೂರು ಶಿಕ್ಷಕ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಪರ ಮತಯಾಚನೆ ಮಾಡಿರುವುದನ್ನು ಯಶವಂತಪುರ ಕ್ಷೇತ್ರದ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಸಮರ್ಥಿಸಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಸೋಮಶೇಖರ್, ಕಾಂಗ್ರೆಸ್ ಅಭ್ಯರ್ಥಿ ನನ್ನ ಕಚೇರಿಗೆ ಬಂದು ಮನವಿ ಮಾಡಿದ್ದರು. ಅದರಲ್ಲಿ ತಪ್ಪೇನಿದೆ? ಅವರ ಪರ ಮತಯಾಚಿಸಿದ್ದಕ್ಕೆ ಬಿಜೆಪಿಗರು ನನ್ನನ್ನು ಪಕ್ಷ ವಿರೋಧಿ ಅಂತಾ ಪರಿಗಣಿಸಿದ್ರೆ ಪರಿಗಣಿಸಲಿ ಎಂದು ನೇರವಾಗಿ ಹೇಳಿದ್ದಾರೆ.
ನನ್ನ ಸಸ್ಪೆಂಡ್ ಮಾಡ್ತಾರೆ ಅಂದರೆ ಮಾಡಲಿ ಡೋಂಟ್ ಕೇರ್. ಪಕ್ಷಕ್ಕೆ ದ್ರೋಹ ಮಾಡಿದವರನ್ನೇ ಸೇರ್ಪಡೆ ಮಾಡಿಕೊಳ್ತಿದ್ದಾರೆ. ರಾಜ ಮರ್ಯಾದೆ ಕೊಟ್ಟು ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದ್ದರೆ. ನನ್ನನ್ನು ಪಕ್ಷದಿಂದ ಸಸ್ಪೆಂಡ್ ಮಾಡ್ತಾರೆ ಅಂತಾದರೆ ಮಾಡಲಿ. ಜೆಡಿಎಸ್ ಅಭ್ಯರ್ಥಿಯ ಪರ ನಾನು ಯಾವ ಕಾರಣಕ್ಕೂ ಮತ ಕೇಳಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ.