
ಭಾರತದ ಹ್ಯಾಮರ್ ಥ್ರೋ ಆಟಗಾರ್ತಿ ರಚನಾ ಕುಮಾರಿ ಅವರಿಗೆ ಮಂಗಳವಾರ 12 ವರ್ಷಗಳ ನಿಷೇಧ ಹೇರಲಾಗಿದೆ. ರಚನಾ ಹಲವಾರು ಡೋಪ್ ಪರೀಕ್ಷೆಗಳಲ್ಲಿ ವಿಫಲವಾದ ಕಾರಣ ಇಂಟರ್ನ್ಯಾಷನಲ್ ಫೆಡರೇಶನ್ ಅಥ್ಲೆಟಿಕ್ಸ್ ಇಂಟೆಗ್ರಿಟಿ ಯೂನಿಟ್ (AIU) ಈ ನಿಷೇಧವನ್ನು ವಿಧಿಸಿದೆ.
ರಚನಾ ಅವರ ಡೋಪ್ ಮಾದರಿಯನ್ನು ಪಂದ್ಯಾವಳಿಯ ಹೊರಗೆ ತೆಗೆದುಕೊಳ್ಳಲಾಗಿದೆ ಮತ್ತು ಅದರಲ್ಲಿ ಸ್ಟೀರಾಯ್ಡ್‌ಗಳಾದ ಸ್ಟಾನೊಜೋಲೋಲ್, ಮೆಟಾಂಡಿನೋನ್, ಡಿಹೈಡ್ರೋಕ್ಲೋರೋಮೆಥೈಲ್‌ಟೆಸ್ಟೋಸ್ಟೆರಾನ್ (ಡಿಎಚ್‌ಸಿಎಂಟಿ) ಮತ್ತು ಕ್ಲೆನ್‌ಬುಟೆರಾಲ್ ಕಂಡುಬಂದಿದೆ.
ನವೆಂಬರ್ 24, 2023 ರಿಂದ ರಚನಾ ಅವರನ್ನು 12 ವರ್ಷಗಳ ಕಾಲ ನಿಷೇಧಿಸಲಾಗಿದೆ ಎಂದು ಎಐಯು ಹೇಳಿದೆ. ಕ್ರೀಡಾಪಟುವಿನ ಫಲಿತಾಂಶಗಳನ್ನು ಸೆಪ್ಟೆಂಬರ್ 24, 2023 ರಿಂದ ಅಮಾನ್ಯವೆಂದು ಪರಿಗಣಿಸಲಾಗುತ್ತದೆ.
ಇದು ರಚನಾ ಅವರ ಎರಡನೇ ಡೋಪಿಂಗ್ ವಿರೋಧಿ ನಿಯಮ ಉಲ್ಲಂಘನೆಯಾಗಿದೆ. ಫೆಬ್ರವರಿ 10, 2015 ರಂದು ರಚನಾ ಅವರ ಮಾದರಿಯಲ್ಲಿ ಮೆಟೆನೋಲೋನ್ ಕಂಡುಬಂದಿದೆ ಎಂದು AIU ಹೇಳಿದೆ. IAF ಡೋಪಿಂಗ್ ವಿರೋಧಿ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಅವರಿಗೆ ಮಾರ್ಚ್ 18, 2015 ರಿಂದ ಮಾರ್ಚ್ 17, 2019 ರವರೆಗೆ ನಾಲ್ಕು ವರ್ಷಗಳ ನಿಷೇಧ ಹೇರಲಾಗಿತ್ತು.