
ಹೌದು, ಅಪ್ರಾಪ್ತ ಮಕ್ಕಳ ವಾಹನ ಚಾಲನೆ ಹಾಗೂ ಬೆಂಗಳೂರಿನ ರಸ್ತೆಗಳಲ್ಲಿ ಬೈಕ್ನಲ್ಲಿ ವ್ಹೀಲಿಂಗ್ ಮಾಡುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ಹಿನ್ನೆಲೆ ಸಂಚಾರಿ ಪೊಲೀಸರು ಪೋಷಕರಿಗೆ ಬಿಸಿ ಮುಟ್ಟಿಸಲಿದ್ದಾರೆ.
ವೀಲಿಂಗ್ ಮಾಡಿ ಸಿಕ್ಕಿಬೀಳುವವರಲ್ಲಿ ಬಹುತೇಕರು ಅಪ್ರಾಪ್ತರಾಗಿದ್ದಾರೆ. ಹೀಗಾಗಿ ಅಪ್ರಾಪ್ತರಿಗೆ ಬೈಕ್ ಓಡಿಸಲು ನೀಡಿದ ತಪ್ಪಿಗೆ ಅವರ ಪೋಷಕರಿಗೆ ದಂಡ ವಿಧಿಸಿ 10 ರಿಂದ 5 ಲಕ್ಷಮೌಲ್ಯದಬಾಂಡ್ ಪಡೆಯಲಾಗುತ್ತಿದೆ. ಅಪ್ರಾಪ್ತ ವಯ ಸ್ಸಿನ ಮಕ್ಕಳಿಗೆ ವಾಹನ ಸವಾರಿ ಮಾಡಲು ನೀಡಿದ ತಪ್ಪಿಗೆ ನ್ಯಾಯಾಲಯದಲ್ಲಿ ಪೋಷಕರು ದಂಡ ಪಾವತಿಸಿದ್ದಾರೆ. ವಾಹನಗಳನ್ನು ಕೂಡ ಜಪ್ತಿ ಸಹ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

