ಬೆಂಗಳೂರು : ಶಾಲೆಗಳ 2023-24 ನೇ ಸಾಲಿನ ಪ್ರಥಮ ಮಾನ್ಯತೆ ಹಾಗೂ ಮಾನ್ಯತೆ ನವೀಕರಣಕ್ಕೆ ಅರ್ಜಿ ಇತ್ಯರ್ಥಪಡಿಸಲು ಅಂತಿಮವಾಗಿ ಅವಧಿಯನ್ನು ವಿಸ್ತರಿಸಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
2023-24ನೇ ಸಾಲಿಗೆ ಖಾಸಗಿ ಶಾಲೆಗಳ ಪ್ರಥಮ ಮಾನ್ಯತೆ/ಮಾನ್ಯತೆ ನವೀಕರಣಕ್ಕೆ ಆನ್ ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಜುಲೈ-2023 ರಿಂದ ಅವಕಾಶ ಕಲ್ಪಿಸಿದ್ದು, ವಿವಿಧ ಕಾರಣಗಳಿಂದಾಗಿ ಆರನೇ ಬಾರಿಗೆ ಅವಧಿ ವಿಸ್ತರಿಸಿ ಆರ್.ಟಿ.ಇ ಶುಲ್ಕ ಮರುಭರಣ ಹಾಗೂ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಆಡಳಿತ ಮಂಡಳಿಗೆ ದಿನಾಂಕ:23-01-2024 ರವರೆಗೆ ತಂತ್ರಾಂಶದಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಆದರೆ ಅವಧಿ ಮೀರಿದ ಅರ್ಜಿಗಳು, ತಿರಸ್ಕೃತಗೊಂಡ ಅರ್ಜಿಗಳಿಗೆ ಅವಕಾಶ ಕಲ್ಪಿಸುವ ಕುರಿತು, ಅರ್ಜಿಯನ್ನು ಮರು ಸಲ್ಲಿಕೆ ಮಾಡಲು ಹಾಗೂ ಉಪನಿರ್ದೇಶಕರ ಲಾಗಿನ್ ನಲ್ಲಿ ಉಳಿಕೆ ಇರುವ ಎಲ್ಲಾ ಅರ್ಜಿಗಳನ್ನು ಇತ್ಯರ್ಥಪಡಿಸದೇ ಇರುವ ಕೆಲವು ಅಂಶಗಳನ್ನು ದಿನಾಂಕ:05-02-2024ರ ಕಡೆ ದಿನಾಂಕಕ್ಕೆ ತಂತ್ರಾಂಶದಲ್ಲಿ ಗಮನಿಸಲಾಗಿದೆ.
ಈ ಹಿನ್ನೆಲೆ ಸದರಿ 2023-24ನೇ ಸಾಲಿನಲ್ಲಿ ಮಾನ್ಯತೆ ನವೀಕರಣಕ್ಕೆ ಆನ್ ಲೈನ್ ಮುಖಾಂತರ ಅರ್ಜಿ ಇತ್ಯರ್ಥಪಡಿಸಲು ಹಾಗೂ ಪುನರ್ ಸಲ್ಲಿಸಲು ಕೆಲವು ಉಪನಿರ್ಧೇಶಕರುಗಳು ಹಾಗೂ ಆಡಳಿತ ಮಂಡಳಿಗಳಿಂದ ಸ್ವೀಕೃತಗೊಂಡ ಮನವಿಯಂತೆ ಹಾಗೂ 05, 08 ಮತ್ತು 09ನೇ ತರಗತಿಗಳ ಮೌಲ್ಯಾಂಕನ, ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳ ಪರೀಕ್ಷಾ ಹಿತದೃಷ್ಟಿಯಿಂದ ಹಾಗೂ ಆರ್.ಟಿ.ಇ ಶುಲ್ಕ ಮರುಪಾವತಿ ಸಂಬಂಧ ಮಾನ್ಯತೆ ನವೀಕರಣ ಅಗತ್ಯತೆ ಇರುವುದನ್ನುಪರಿಶೀಲಿಸಿದ್ದು, 2021-22 ಹಾಗೂ 2022-23ನೇ ಸಾಲಿನಲ್ಲಿ ಪ್ರಥಮ ಮಾನ್ಯತೆ/ಮಾನ್ಯತೆ ನವೀಕರಣವಾಗದಿರುವಂತಹ ಶಾಲೆಗಳಿಗೆ ಪ್ರತ್ಯೇಕವಾಗಿ “ಅರ್ಜಿ ಸಲ್ಲಿಸಲು ಹಾಗೂ 2023-24ನೇ ಸಾಲಿಗೆ ಶಾಲೆಗಳು ಪ್ರಥಮ ಮಾನ್ಯತೆ/ಮಾನ್ಯತೆ ನವೀಕರಣಕ್ಕಾಗಿ ಅರ್ಜಿ ಸ್ವೀಕರಿಸಿ ಇತ್ಯರ್ಥಪಡಿಸಲು ದಿ:06-02-2024 ರಿಂದ ದಿನಾಂಕ:15-02-2024 ರವರೆಗೆ ಅಂತಿಮ ಅವಕಾಶ ನೀಡಲಾಗಿದೆ.
ಈವರೆಗೂ ಪ್ರಥಮ ಮಾನ್ಯತೆ/ಮಾನ್ಯತೆ ನವೀಕರಣ ಪಡೆಯದಿರುವ ಶಾಲಾಆಡಳಿತ ಮಂಡಳಿಗೆ ಅರ್ಜಿ ಸಲ್ಲಿಸಲು ಅಂತಿಮ ಅವಕಾಶ ನೀಡಿದ್ದು, ನಿಗದಿತ ದಿನಾಂಕದೊಳಗೆ ಸೂಕ್ತ ದಾಖಲೆಗಳೊಂದಿಗೆ ತಂತ್ರಾಂಶದ ಮೂಲಕ ಅರ್ಜಿ ಸಲ್ಲಿಸಿ ಮಾನ್ಯತೆ ಪಡೆಯುವಂತೆ ಜಿಲ್ಲಾ ಉಪನಿರ್ದೇಶಕರು (ಆಡಳಿತ) ಇವರು ಕ್ರಮ ವಹಿಸುವುದು ಎಂದು ಶಾಲಾ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
![](https://kannadadunia.com/wp-content/uploads/2024/02/1-2.jpg)
![](https://kannadadunia.com/wp-content/uploads/2024/02/2-2.jpg)