ಮೆಕ್ಯಾನಿಕಲ್ ಎಂಜಿನಿಯರಿಂಗ್ ನಲ್ಲಿ ಡಾಕ್ಟರೇಟ್ ಅಧ್ಯಯನ ಮಾಡುತ್ತಿದ್ದ ಭಾರತೀಯ-ಅಮೆರಿಕನ್ ಪರ್ಡ್ಯೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸೋಮವಾರ ಸಂಜೆ ಶವವಾಗಿ ಪತ್ತೆಯಾಗಿದ್ದಾನೆ ಎಂದು ವಾರೆನ್ ಕೌಂಟಿ ಕರೋನರ್ ಕಚೇರಿ ವರದಿ ಮಾಡಿದೆ.
23 ವರ್ಷದ ಸಮೀರ್ ಕಾಮತ್ 2023ರ ಆಗಸ್ಟ್ನಲ್ಲಿ ಪರ್ಡ್ಯೂ ವಿಶ್ವವಿದ್ಯಾಲಯದಿಂದ ಇದೇ ಕ್ಷೇತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಅಮೆರಿಕ ಪೌರತ್ವ ಪಡೆದಿದ್ದಾನೆ ಎಂದು ಕರೋನರ್ ಕಚೇರಿ ದೃಢಪಡಿಸಿದೆ.
ಕಾಮತ್ ಅವರ ಶವ ಸಂಜೆ 5 ಗಂಟೆ ಸುಮಾರಿಗೆ ಪತ್ತೆಯಾಗಿದೆ. ವಿಲಿಯಮ್ಸ್ಪೋರ್ಟ್ನ 3300 ನಾರ್ತ್ ವಾರೆನ್ ಕೌಂಟಿ ರೋಡ್ 50 ವೆಸ್ಟ್ನಲ್ಲಿರುವ ನಿಚೆಸ್ ಲ್ಯಾಂಡ್ ಟ್ರಸ್ಟ್ನ ಭಾಗವಾಗಿರುವ ಕ್ರೋಸ್ ಗ್ರೋವ್ ನೇಚರ್ ಪ್ರಿಸರ್ವ್ನಲ್ಲಿ ಶವ ಪತ್ತೆಯಾಗಿದೆ ಎಂದು ವರದಿಯಾಗಿದೆ. ವಾರೆನ್ ಕೌಂಟಿ ಕೊರೋನರ್ ಜಸ್ಟಿನ್ ಬ್ರುಮೆಟ್ ಮಂಗಳವಾರ ಮಧ್ಯಾಹ್ನ ಈ ವಿವರಗಳೊಂದಿಗೆ ಸುದ್ದಿ ಪ್ರಕಟಣೆ ಹೊರಡಿಸಿದ್ದಾರೆ.