ವಿಶಾಲ್ ಕೃಷ್ಣ ನಿರ್ದೇಶಿಸಿ ನಾಯಕನಾಗಿ ಅಭಿನಯಿಸಿರುವ ‘ಐಶು ವಿತ್ ಮಾದೇಶ’ ಚಿತ್ರದ ಟ್ರೈಲರ್, ಯುಟ್ಯೂಬ್ ನಲ್ಲಿ ರಿಲೀಸ್ ಆಗಿದೆ.ಈಗಾಗಲೇ ತನ್ನ ಟೈಟಲ್ ಮೂಲಕವೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಈ ಸಿನಿಮಾದಲ್ಲಿ ವಿಶಾಲ್ ಕೃಷ್ಣ, ಶ್ರೇಯ ರಾಮ್, ಕುರಿ ಸುನಿಲ್, ಪ್ರಕಾಶ್, ಲೋಕೇಶ್, ಮತ್ತು ಅನ್ನಪೂರ್ಣ ಸೇರಿದಂತೆ ಹಲವರ ತಾರಾ ಬಳಗವಿದೆ.
ಲವ್ ಸ್ಟೋರಿ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಬಾಲಕೃಷ್ಣ ಬರಗೂರು ತಮ್ಮ ಬರಗೂರು ಇಂಟರ್ನ್ಯಾಷನಲ್ ಫಿಲಂ ಬ್ಯಾನರ್ ನಲ್ಲಿ ನಿರ್ಮಾಣ ಮಾಡಿದ್ದಾರೆ. ಆಯುರ್ ಸ್ವಾಮಿ ಸಂಕಲನ, ಅಭಿ ಛಾಯಾಗ್ರಹಣವಿದೆ. ಇನ್ನುಳಿದಂತೆ ಕಾರ್ತಿಕ್ ವೆಂಕಟೇಶ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.