HomeKarnatakaBIG NEWS: ಮೋದಿ ಮುಂದೆ ನಿಂತು ಮಾತನಾಡಲು ಬಿಜೆಪಿ ಸಂಸದರಿಗೆ ಶಕ್ತಿ ಇಲ್ಲ; ಮತ್ತೆ ವಾಗ್ದಾಳಿ...

BIG NEWS: ಮೋದಿ ಮುಂದೆ ನಿಂತು ಮಾತನಾಡಲು ಬಿಜೆಪಿ ಸಂಸದರಿಗೆ ಶಕ್ತಿ ಇಲ್ಲ; ಮತ್ತೆ ವಾಗ್ದಾಳಿ ನಡೆಸಿದ ಶಾಸಕ ಬಾಲಕೃಷ್ಣ

ಬೆಂಗಳೂರು: ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ಪ್ರಶ್ನಿಸಲು ಬಿಜೆಪಿ ಸಂಸದರಿಗೆ ಗಟ್ಟಿ ಧ್ವನಿಯಿಲ್ಲ. ಪ್ರಧಾನಿ ಮೋದಿ ಮುಂದೆ ನಿಂತು ಮಾತನಾಡಲು ಅವರಿಗೆ ಶಕ್ತಿ ಇಲ್ಲ ಎಂದು ಮಾಗಡಿ ಶಾಸಕ ಹೆಚ್.ಸಿ.ಬಾಲಕೃಷ್ಣ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಬಾಲಕೃಷ್ಣ, ಕೇಂದ್ರದಿಂದ ರಾಜ್ಯಕ್ಕೆ ಆಗಿರುವ ಅನ್ಯಾಯ ಖಂಡಿಸಿ ಕಾಂಗ್ರೆಸ್ ನವರು ಮಾಡುತ್ತಿರುವ ಹೋರಾಟ ನೋಡಿಯಾದರೂ ಬಿಜೆಪಿ ಸಂಸದರು ಹೋರಾಟಕ್ಕೆ ಮುಂದಾಗುತ್ತಾರಾ? ಎಂಬ ಅನುಮಾನ ಶುರುವಾಗಿದೆ. ರಾಜ್ಯದ ಬಿಜೆಪಿ ಸಂಸದರಿಗೆ ಮೋದಿ ಮುಂದೆ ನಿಂತು ಮಾತನಾಡಲು ಶಕ್ತಿ ಇಲ್ಲ ಎಂದು ಗುಡುಗಿದರು.

ಮೋದಿ ಮುಂದೆ ಮಾತನಾಡಿದರೆ ಎಲ್ಲಿ ಮನೆಗೆ ಕಳುಹಿಸಿ ಬಿಡ್ತಾರೆ. ಲೋಕಸಭಾ ಚುನಾವಣೆಗೆ ಟಿಕೆಟ್ ಸಿಗುವುದಿಲ್ಲ ಎಂಬ ಭಯ ಅವರಿಗೆ. ಹಾಗಾಗಿ ಕೇಂದ್ರದ ಅನ್ಯಾಯವನ್ನು ಅವರು ಪ್ರಶ್ನಿಸುತ್ತಿಲ್ಲ. ನಾವು ದೇಶ ವಿಭಜನೆ ಮಾಡಿ ಅಂತ ಹೋರಾಟ ಮಾಡುತ್ತಿಲ್ಲ. ನಮಗೆ ಬಿಡುಗಡೆ ಮಾಡದಿರುವ ಅನುದಾನವನ್ನು ಬಿಡುಗಡೆ ಮಾಡಿ ಎಂದು ಹೋರಾಟ ಮಾಡುತ್ತಿದ್ದೇವೆ ಎಂದು ಹೇಳಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular