HomeEntertainmentಇಂದು 'ಕೆಟಿಎಂ' ಚಿತ್ರದ ಟ್ರೈಲರ್ ಲಾಂಚ್

ಇಂದು ‘ಕೆಟಿಎಂ’ ಚಿತ್ರದ ಟ್ರೈಲರ್ ಲಾಂಚ್

ಅರುಣ ನಿರ್ದೇಶನದ ದೀಕ್ಷಿತ್ ಶೆಟ್ಟಿ ಅಭಿನಯದ ಬಹು ನಿರೀಕ್ಷಿತ ‘ಕೆಟಿಎಂ’ ಚಿತ್ರದ ಟ್ರೈಲರ್ ಇಂದು ಬಿಡುಗಡೆಯಾಗಲಿದ್ದು, ಡಿಂಪಲ್ ಕ್ವೀನ್ ರಚಿತಾ ರಾಮ್ ಸೇರದಂತೆ ದಕ್ಷಿಣ ಭಾರತದ ಖ್ಯಾತ ನಟಿ ಕೀರ್ತಿ ಸುರೇಶ್ ಹಾಗೂ  ಖ್ಯಾತ ನಿರ್ದೇಶಕ ರಾಹುಲ್ ರವೀಂದ್ರ, ರಿಷಬ್ ಶೆಟ್ಟಿ ಸೇರಿದಂತೆ ರಶ್ಮಿಕಾ ಮಂದಣ್ಣ  ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸುವ ಮೂಲಕ ಈ ಟ್ರೈಲರ್  ಲಾಂಚ್ ಮಾಡಲಿದ್ದಾರೆ.  ಈ ವಿಚಾರವನ್ನು ಚಿತ್ರ ತಂಡ ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದೆ.

ವಿನಯ್ ನಿರ್ಮಾಣ ಮಾಡಿರುವ ಲವ್ ಸ್ಟೋರಿ  ಕಥಾದಾರಿತ ಈ ಚಿತ್ರದಲ್ಲಿ ದೀಕ್ಷಿತ್ ಶೆಟ್ಟಿ ಸೇರಿದಂತೆ ಸಂಜನಾ ದಾಸ್, ಕಾಜಲ್ ಕುಂದಾರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಚೇತನ್ ರಾವ್ ಸಂಗೀತ ಸಂಯೋಜನೆ ನೀಡಿದ್ದಾರೆ. ಅರ್ಜುನ್ ಕಿಟ್ಟು ಸಂಕಲನ, ನವೀನ್ ಕುಮಾರ್ ಛಾಯಾಗ್ರಹಣವಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular