ಸಾವಿನ ಬಗ್ಗೆ ನಟಿ ‘ಪೂನಂ ಪಾಂಡೆ’ ಸುಳ್ಳು ಸುದ್ದಿ : ನನ್ನ ಪತ್ನಿ ‘ಧೈರ್ಯಶಾಲಿ ಭಾರತೀಯ ಮಹಿಳೆ’ ಎಂದ ಪತಿ..!

ನವದೆಹಲಿ: ಸೋಶಿಯಲ್ ಮೀಡಿಯಾ ಸ್ಟಾರ್ ಪೂನಂ ಪಾಂಡೆ ಅವರು ಗರ್ಭಕಂಠದ ಕ್ಯಾನ್ಸರ್ ಗೆ ಬಲಿಯಾಗಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡ ನಂತರ ಭಾರಿ ಫೇಮಸ್ ಆಗಿದ್ದಾರೆ.

ಕ್ಯಾನ್ಸರ್ ಜಾಗೃತಿ ಮೂಡಿಸುವ ಹೆಸರಿನಲ್ಲಿ ಪೂನಂ ಅವರ ಪ್ರಚಾರ ಸ್ಟಂಟ್ ಬಗ್ಗೆ ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಕಿಡಿಕಾರಿದ್ದಾರೆ . ಇತ್ತೀಚೆಗೆ, ಅವರ ಪತಿ ಸ್ಯಾಮ್ ಬಾಂಬೆ ಪತ್ನಿ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ಪೂನಂ ಜೀವಂತವಾಗಿದ್ದಾರೆ ಎಂದು ತಿಳಿದಾಗ ಬಹಳ ಸಂತೋಷವಾಗಿದೆ ಎಂದು ಹೇಳಿದರು.

ತಮ್ಮ ಪತ್ನಿ ಇನ್ನೂ ಜೀವಂತವಾಗಿದ್ದಾರೆ ಎಂದು ತಿಳಿದಾಗ ಸಂತೋಷವಾಯಿತು. ಅವಳು ಹಾಗೆ ಮಾಡಿದ್ದಕ್ಕೆ ನನಗೆ ಸಂತೋಷವಾಗಿದೆ. ಅವಳು ಜೀವಂತವಾಗಿದ್ದಾಳೆ. ಅದು ನನಗೆ ಸಾಕು ಎಂದರು. ಸ್ಯಾಮ್ ತನ್ನ ಪತ್ನಿ ಪೂನಂ ಪಾಂಡೆ ಮಾಡಿದ ಪ್ರಚಾರ ಸ್ಟಂಟ್ ನ್ನು ಬೆಂಬಲಿಸಿದ್ದು, “ನನ್ನ ಮಾತನ್ನು ಕೇಳಿ, ಯಾರಾದರೂ ತಮ್ಮ ಖ್ಯಾತಿ ಅಥವಾ ಇಮೇಜ್ ಅನ್ನು ಸಂಪೂರ್ಣವಾಗಿ ಕಡೆಗಣಿಸಿ ಸಮಸ್ಯೆಯ ಬಗ್ಗೆ ಜಾಗೃತಿ ಮೂಡಿಸಿದರೆ, ಅದನ್ನು ಗೌರವಿಸೋಣ. ಪೂನಂ ಪಾಂಡೆ ಅವರು ಅತ್ಯಂತ ಧೈರ್ಯಶಾಲಿ ಭಾರತೀಯ ಮಹಿಳೆ ಎಂದು ಅವರು ಹೇಳಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read