ಬೆಂಗಳೂರು : ಬೆಂಗಳೂರಿಗೆ ಅಂಚೆ ಮೂಲಕವೇ 6.51 ಲಕ್ಷ ಮೌಲ್ಯದ ಡ್ರಗ್ಸ್ ರವಾನೆ ಮಾಡಲಾಗಿದ್ದು, ಓರ್ವನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಗಿಫ್ಟ್ ಬಾಕ್ಸ್ ನಲ್ಲಿ ಚರಸ್ ಇಟ್ಟು ಇಂಡಿಯಾ ಪೋಸ್ಟ್ ಮೂಲಕವೇ ಡ್ರಗ್ಸ್ ರವಾನೆ ಮಾಡಲಾಗುತ್ತಿತ್ತು, ಈ ಸಂಬಂಧ ರಿತಿಕ್ ರಾಜ್ ಎಂಬಾತನನ್ನು ಸಿಸಿಬಿ ಪೊಲೀಸರು ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ. ಬೆಂಗಳೂರಿನಲ್ಲಿ ರಿತಿಕ್ ರಾಜ್ ಪಾರ್ಸೆಲ್ ರಿಸೀವ್ ಮಾಡಿದ್ದು, ಸಿಸಿಬಿ ಪೊಲೀಸರ ಕೈಗೆ ತಗ್ಲಾಕೊಂಡಿದ್ದಾನೆ. ಚರಸ್ ಮಾದಕ ವಸ್ತು ಗಿಫ್ಟ್ ಬಾಕ್ಸ್ ರೂಪದಲ್ಲಿ ಅಂಚೆ ಮೂಲಕ ನಗರಕ್ಕೆ ಬಂದಿದೆ.ಗಿಫ್ಟ್ ಬಾಕ್ಸ್ ರೂಪದಲ್ಲಿ ನಗರಕ್ಕೆ ಚರಸ್ ಡ್ರಗ್ಸ್ನ ಕಳುಹಿಸಲಾಗಿತ್ತು.
ರಿತಿಕ್ ರಾಜ್ ಪಾರ್ಸೆಲ್ ರಿಸೀವ್ ಮಾಡುತ್ತಿದ್ದಾಗ ಸಿಸಿಬಿ ಪೊಲೀಸರು ಬಂದಿದ್ದಾರೆ. ನಂತರ ಪೊಲೀಸರು ಬಾಕ್ಸ್ ಓಪನ್ ಮಾಡಿಸಿದಾಗ ಚರಸ್ ಇರುವುದು ಪತ್ತೆಯಾಗಿದೆ. ಸುಮಾರು 6.50 ಲಕ್ಷ ಮೌಲ್ಯದ 130 ಗ್ರಾಂ ಚರಸ್ ಪತ್ತೆಯಾಗಿದೆ. ಆರೋಪಿ ರಿತಿಕ್ ರಾಜ್ ನನ್ನು ಪೊಲೀಸರು ಬಂಧಿಸಿದ್ದು, ಪಾರ್ಸೆಲ್ ಕಳುಹಿಸಿದ ಆರೋಪಿ ಅದಿತ್ ಸರ್ವೋತ್ತಮ್ ರಿಷಿಕೇಷ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಈ ಬಗ್ಗೆ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.